ಕೈಕಂಬ: ಹೆಸರಾಂತ ನಿರ್ಮಾಣ ಸಂಸ್ಥೆ ಶ್ರೀ ಗಣೇಶ್ ಕನ್‌ಸ್ಟ್ಸಕ್ಷನ್ಸ್‌ನ (ಜಿ.ಬಿ. ಗ್ರೂಪ್) ನ ಮಾಲಕ ಗುರುನಗರ ನಿವಾಸಿ ಗಣೇಶ್ ಬಂಗೇರ (೬೨) ಅವರು ಅಸೌಖ್ಯದಿಂದ ಫೆ. ೧೪ ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

4e497c1e-0d34-44bd-be65-1cdec4f3ca23
ಕಳೆದ ೪೨ ವರ್ಷಗಳಿಂದ ಬಿಲ್ಡರ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದ ಅವರು ಕ್ರೆಡಾಯ್‌ನ ಮಾಜಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ಯೆಯ್ಯಾಡಿಯ ರಾಮ ಭಜನಾ ಮಂದಿರ, ರಾಮಾಶ್ರಮ ಅನುದಾನಿತ ಶಾಲೆಯ ಆಡಳಿತ ಮಂಡಳಿ, ಕೊಪ್ಪಲ ಕಾಡು ನಾಗ ಬನ ಮತ್ತು ಸಸಿಹಿತ್ಲು ಬಂಗೇರ ನಾಗಬನದ ಅಧ್ಯಕ್ಷರಾಗಿದ್ದರು.ಬಿಲ್ಲವ ಸಮಾಜದ ಮುಖಂಡರಾಗಿದ್ದ ಅವರು ಬಿಲ್ಲವ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರಾಗಿದ್ದರು. ಪದವಿನಂಗಡಿ ಗುರುನಗರದ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಕಳೆದ ೨೩ ವರ್ಷಗಳಿಂದ ನಿರಂತರ ಸೇವೆ ಸಲ್ಲಿಸಿ ಸಂಘ ಮತ್ತು ಶ್ರೀ ನಾರಾಯಣ ಗುರು ಮಂದಿರದ ಅಭಿವೃದ್ಧಿಗೆ ಶ್ರಮಿಸಿದ್ದರು. ಹಲವು ದೇವಸ್ಥಾನ, ದೈವಸ್ಥಾನ, ಮಠ ಮಂದಿರಗಳ ಅಭಿವೃದ್ಧಿಗೆ ನೆರವು, ನಾಡಿನ ಸಂಘ ಸಂಸ್ಥೆಗಳ ಪ್ರೋತ್ಸಾಹಕ, ಕಲೆ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿಯ ಆರಾಧಕರಾಗಿ ಸಮಾಜದ ಎಲ್ಲಾ ವಿಚಾರ ವಿಷಯಗಳಿಗೆ ತನು-ಮನ-ಧನಗಳಿಂದ ಸಹಕರಿಸಿದ್ದರು.

By Suddi9

Leave a Reply

Your email address will not be published. Required fields are marked *