ದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷದ ಸುದೀರ್ಘ ವಿಚಾರಣೆಯ ನಂತ್ರ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯ ಸೆ.30ರಂದು ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದ್ದು,  ಶ್ರೀ ಎಲ್.ಕೆ. ಅಡ್ವಾಣಿರವರು, ಮುರಳಿ ಮನೋಹರ್ ಜೋಶಿ ಅವರು ಉಮಭಾರತಿರವರು ಸೇರಿ 32 ಜನರಿಗೆ ಕ್ಲೀನ್ ಚೀಟ್ ನೀಡಿದೆ..

 2c36baad-1d72-49c9-a46a-93d4a69a1334
ಸಿಬಿಐ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ತೀರ್ಪು ಪ್ರಕಟಿಸಿದ್ದು, ಇದು ಪೂರ್ವ ನಿಯೋಜಿತ ಕಾರ್ಯವಲ್ಲ, ಅವರನ್ನ ಆರೋಪಿಗಳು ಎನ್ನುಲು ಯಾವುದೇ ಸಾಕ್ಷ್ಯಗಳಿಲ್ಲ. ಹಾಗಾಗಿ ನಿರ್ದೋಸಿಗಳು ಎಂದು ನ್ಯಾಯಾಲಯ ಆದೇಶ ನೀಡಿದೆ , ಸುಮಾರು 2000 ಪುಟಗಳ ತೀರ್ಪು ಸಿದ್ಧಪಡಿಸಿದ್ದ ನ್ಯಾಯಾಲಯ ಈ ತೀರ್ಪು ನೀಡಿದೆ.

ಕರೊನಾ ವೈರಸ್ ಸೋಂಕಿನ ಹವಾಳಿಯ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಜಿ ಉಪ ಪ್ರಧಾನಿ ಶ್ರೀ ಎಲ್ ಕೆ ಅಡ್ವಾಣಿರವರು, ಕೇಂದ್ರದ ಮಾಜಿ ಸಚಿವ ಶ್ರೀ ಮುರಳಿ ಮನೋಹರ್ ಜೋಶಿರವರು, ಕೇಂದ್ರದ ಮಾಜಿ ಸಚಿವೆ ಶ್ರೀ ಮತಿ ಉಮಾ ಭಾರತಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ರೀ ಕಲ್ಯಾಣ್ ಸಿಂಗ್ ರವರು ಸೇರಿದಂತೆ ಪ್ರಮುಖರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.

By suddi9

Leave a Reply

Your email address will not be published. Required fields are marked *