Published On: Thu, Apr 1st, 2021

ರಾಷ್ಟ್ರೀಯ ಶಿಕ್ಷಣ ಸಮಾವೇಶ ಮೇಡಂ ಗ್ರೇಸ್ ಪಿಂಟೋ ಅವರಿಗೆ ಜೀವಮಾನದ ಸಾಧನಾ ಪುರಸ್ಕಾರ ಪ್ರದಾನ

ದೆಹಲಿ :  ಇತ್ತೀಚೆಗೆ ಉಡಾನ್ ಸಂಸ್ಥೆ ಮತ್ತು ಎಜು ಅಡ್ವೈಸ್ ಆಯೋಜಿಸಿದ್ದ  ರಾಷ್ಟ್ರೀಯ ಶಿಕ್ಷಣ ಸಮಾವೇಶದಲ್ಲಿ ನಡೆಸಲ್ಪಟ್ಟ ಎಕ್ಸಲೆನ್ಸಿ ಅವಾರ್ಡ್ಸ್ ಎ 01 2021 ರ ಸಂದರ್ಭದಲ್ಲಿ ರಾಯಾನ್ ಇಂಟರ್‌ನೇಶನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ವ್ಯವಸ್ಥಾಪಕ ನಿರ್ದೇಶಕ ಮೇಡಂ ಡಾ| ಗ್ರೇಸ್ ಪಿಂಟೋ ಅವರಿಗೆ ಜೀವಮಾನದ ಸಾಧನಾ ಪುರಸ್ಕಾರ-೨೦೨೧ (ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್) ಅನ್ನು ಪ್ರದಾನಿಸಿ ಗೌರವಿಸಲಾಯಿತು. ಸರಕರೇತರ ಸಂಸ್ಥೆಗಳ  ಸಹಯೋಗದೊಂದಿಗೆ ನಾಟಕ ಕಲೆ, ಶಿಕ್ಷಣ ಮತ್ತು ಸಾಮಾಜಿಕ ವಿಷಯಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಪಮ ಸೇವೆಗೆ ಈ ಪುರಸ್ಕಾರ ಪ್ರದಾನಿಸಲಾಗಿದೆ12. Life Time Achievement Award - Udaan - Edu Advice

ಗ್ರೇಸ್ ಪಿಂಟೋ ಅವರ ಪರವಾಗಿ ರಾಯಾನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕಿ ಡಾ| ಸ್ನೇಹಲ್ ಪಿಂಟೋ ಪುರಸ್ಕಾರ ಸ್ವೀಕರಿಸಿದರು. ಎನ್‌ಸಿಆರ್‌ಟಿ ಸಂಸ್ಥೆಯ ಜಂಟಿ ನಿರ್ದೇಶಕ ಶ್ರೀಧರ್ ಶ್ರೀವತ್ಸವ, ಕಾರ್ಯದರ್ಶಿ ಮೇಜರ್ ಹರ್ಷ್ ಕುಮಾರ್ ಇವರುಗಳ ಸಮ್ಮುಖದಲ್ಲಿಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರು ಪ್ರಶಸ್ತಿ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಈ ಪ್ರಶಸ್ತಿಯ ಬಗ್ಗೆ ಹರ್ಷ ವ್ಯಕ್ತ ಪಡಿಸಿ ಮಾತನಾಡಿದ ಮೇಡಂ ಗ್ರೇಸ್ ಪಿಂಟೊ, ಶಿಕ್ಷಣ ವಿಭಾಗದಲ್ಲಿ ನಮ್ಮ ಪ್ರಯತ್ನಗಳನ್ನು ಗುರುತಿಸಿ ನಮಗೆ ಜೀವಮಾನದ ಸಾಧನೆ ಪ್ರಶಸ್ತಿ ೨೦೨೧ಅನ್ನು ನೀಡಿದ್ದಕ್ಕಾಗಿ ನಾವು `ಉಡಾನ್’ ಮತ್ತು ಎಜು ಅಡ್ವೈಸ್ ಹಾಗೂ ಎನ್‌ಜಿಒ ಸಂಸ್ಥೆಗಳಿಗೆ ಕೃತಜ್ಞರಾಗಿರುತ್ತೇವೆ. ನಮ್ಮ ಮೇಲೆ ನಿರಂತರ ಆಶೀರ್ವಾದಗಳನ್ನಿತ್ತು ಈ ಮಟ್ಟಕ್ಕೆ ಬೆಳೆಸಿದ ಕರ್ತನಾದ ಯೇಸುಕ್ರಿಸ್ತರಿಗೆ ಧನ್ಯವಾದಗಳು. ಈ ಪ್ರಶಸ್ತಿಯನ್ನು ನಮ್ಮ ರಾಯನ್ ಬಳಗದ ಸರ್ವರಿಗೂ ಅರ್ಪಿಸುತ್ತೇವೆ. ನಮ್ಮ ಸಮರ್ಪಿತ ಸಿಬ್ಬಂದಿ ಮತ್ತು ಶಿಕ್ಷಕರ ತಂಡ, ನಮ್ಮ ಪೋಷಕರು ಮತ್ತು ವಿದ್ಯಾರ್ಥಿಗಳು ಅವರ ಕಠಿಣ ಪರಿಶ್ರಮ, ಸಹಯೋಗ ಮತ್ತು ಶಿಕ್ಷಣ ವಿಭಾಗದಲ್ಲಿ ಹೆಚ್ಚಿನ ಫಲಿತಾಂಶಗಳನ್ನು ಸಾಧಿಸುವ ಪ್ರಯತ್ನಗಳಿಗೆ ಸಂದ ಗೌರವ ಇದಾಗಿದೆ. ಒಂದು ಸಮೂಹವಾಗಿ, ನಾವು ೨೧ನೇ ಶತಮಾನದ ಸಮಗ್ರ ಶಿಕ್ಷಣದ ಮೂಲಕ ಆಜೀವ, ಜಾಗತಿಕ ನಾಗರಿಕರನ್ನು ಪೋಷಿಸುತ್ತಿದ್ದೇವೆ.

ಶಾಲಾ ಶಿಕ್ಷಣದಲ್ಲಿ ಕ್ರಾಂತಿಯನ್ನು ಉಂಟು ಮಾಡಿದ ವೆಬ್ ಸುದ್ದಿ ಪೋರ್ಟಲ್ `ಎಜು ಅಡ್ವೈಸ್ ಸಹಯೋಗದೊಂದಿಗೆ ಉಡಾನ್ ಆಯೋಜಿಸಿದ್ದ ಈ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಶೈಕ್ಷಣಿಕ ಕ್ಷೇತ್ರದಲ್ಲಿ ದೇಶಾದ್ಯಂತ ಐಕ್ಯತೆ ಸಾಧಿಸಿದೆ. ಶೈಕ್ಷಣಿಕ ವಲಯದ ಶಿಕ್ಷಣತಜ್ಞರು ಮತ್ತು ದಂತಕಥೆಗಳ ಗಮನಾರ್ಹ ಕೊಡುಗೆ ಮತ್ತು ಕಾರ್ಯವೈಖರಿ ಇಲ್ಲಿನ ವಿಶೇಷತೆ ಆಗಿದೆ. ಶಿಕ್ಷಣ ತಜ್ಞರು, ಮಾನವರು, ಆಡಳಿತ ಸಾಧಕರ ತಂಡದ ಭಾರಿ ಪ್ರಕ್ರಿಯೆಯ ಮೂಲಕ ಗುರುತಿಸಿ ನಾಮನಿರ್ದೇಶನ ಮಾಡಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದು ಎಲ್ಲರಿಗೂ ಅಭಿವಂದಿಸುವೆವು ಎಂದು ಡಾ| ಸ್ನೇಹಲ್ ಪಿಂಟೋ ತಿಳಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter