ಎಡಪದವಿನ    ಬೀಡಿ ಕಂಟ್ರಾಕ್ಟರ್  ರಾಗಿದ್ದ  ಅಬ್ದುಲ್  ಖಾದರ್ ಹಾಜಿ(90)  ಜು.8 ರ ಬುಧವಾರ  ನಿಧನರಾದರು.  ಅಬ್ದುಲ್ ಖಾದರ್ ಹಾಜಿ ಯವರು ಸಾಮಾಜಿಕ, ಧಾರ್ಮಿಕ, ಮುಖಂಡರಾಗಿದ್ದು ಕೊಡುಗೈ ದಾನಿಯೂ ಆಗಿದ್ದರು. ಎಡಪದವಿನಲ್ಲಿ  ಬೀಡಿ ಸೈಟ್ ಕಾಲೋನಿ ನಿರ್ಮಾಣ ದಲ್ಲಿ ಪ್ರಮುಖ  ಪಾತ್ರ ವಹಿಸಿ, 38 ಮನೆಗಳ ನಿರ್ಮಾಣದ ನೇತೃತ್ವ ವಹಿಸಿದ್ದರು.
20200708_182143ಎಡಪದವು   ಉಮ್ಮಹಾತುಲ್  ಮು ಮಿನೀನ್  ಜುಮ್ಮಾ ಮಸೀದಿಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿ 1998 ರಿಂದಲೂ ಅದರ ಗೌರವಾಧ್ಯಕ್ಷ ರಾಗಿ ದುಡಿದ ಖಾದರ್ ಅವರು . ಸಮಾಜದಲ್ಲಿ  ಸರ್ವಧರ್ಮೀಯರಿಂದಲೂ ಗೌರವಿಸಲ್ಪಡುತ್ತಿದ್ದ  ಜಾತ್ಯಾತೀತ ವ್ಯಕ್ತಿ ಯಾಗಿ, ಎಲ್ಲರನ್ನೂ ಸಮಾನ ಮನೋಭಾವದಿಂದ ನೋಡುತ್ತಿದ್ದರು.  ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಹಾಗೂ ಅಳಿಯಂದಿರನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *