ಎಡಪದವಿನ ಬೀಡಿ ಕಂಟ್ರಾಕ್ಟರ್ ರಾಗಿದ್ದ ಅಬ್ದುಲ್ ಖಾದರ್ ಹಾಜಿ(90) ಜು.8 ರ ಬುಧವಾರ ನಿಧನರಾದರು. ಅಬ್ದುಲ್ ಖಾದರ್ ಹಾಜಿ ಯವರು ಸಾಮಾಜಿಕ, ಧಾರ್ಮಿಕ, ಮುಖಂಡರಾಗಿದ್ದು ಕೊಡುಗೈ ದಾನಿಯೂ ಆಗಿದ್ದರು. ಎಡಪದವಿನಲ್ಲಿ ಬೀಡಿ ಸೈಟ್ ಕಾಲೋನಿ ನಿರ್ಮಾಣ ದಲ್ಲಿ ಪ್ರಮುಖ ಪಾತ್ರ ವಹಿಸಿ, 38 ಮನೆಗಳ ನಿರ್ಮಾಣದ ನೇತೃತ್ವ ವಹಿಸಿದ್ದರು.
ಎಡಪದವು ಉಮ್ಮಹಾತುಲ್ ಮು ಮಿನೀನ್ ಜುಮ್ಮಾ ಮಸೀದಿಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿ 1998 ರಿಂದಲೂ ಅದರ ಗೌರವಾಧ್ಯಕ್ಷ ರಾಗಿ ದುಡಿದ ಖಾದರ್ ಅವರು . ಸಮಾಜದಲ್ಲಿ ಸರ್ವಧರ್ಮೀಯರಿಂದಲೂ ಗೌರವಿಸಲ್ಪಡುತ್ತಿದ್ದ ಜಾತ್ಯಾತೀತ ವ್ಯಕ್ತಿ ಯಾಗಿ, ಎಲ್ಲರನ್ನೂ ಸಮಾನ ಮನೋಭಾವದಿಂದ ನೋಡುತ್ತಿದ್ದರು. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಹಾಗೂ ಅಳಿಯಂದಿರನ್ನು ಅಗಲಿದ್ದಾರೆ.