ಯುವಿಗೆ 14 ಕೋಟಿ: ಉದ್ಯೋಗಿಗಳಿಗೆ ಸಂಬಳ ನೀಡಲು ಹಣವಿಲ್ಲ
ಬೆಂಗಳೂರು: ಕೆಲವು ದಿನಗಳ ಹಿಂದೆ ಐಪಿಎಲ್ ಆಟಗಾರರ ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್ಮ್ಯಾನ್ ಯುವರಾಜ್ ಸಿಂಗ್ನನ್ನು ಖರೀದಿಸಲು ಬರೋಬ್ಬರಿ 14 ಕೋಟಿ ರೂ, ಖಚರ್ು ಮಾಡಿದ ವಿಜಯ್ ಮಲ್ಯಾ ಅವರ ಕಿಂಗ್ಫಿಶರ್ ಏರ್ಲೈನ್ಸ್ ಸಂಸ್ಥೆಯ ಉದ್ಯೋಗಿಗಳು ಕಳೆದ 18 ತಿಂಗಳುಗಳಿಂದ ವೇತನವಿಲ್ಲದೆ ಪರದಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಕಿಂಗ್ ಫಿಶರ್ ಉದ್ಯೋಗಿಗಳು ಯುವರಾಜ್ಗೆ ಪತ್ರ ಬರೆದು ಆರ್ಸಿಬಿ ಪರ ಆಡದಂತೆ ಮನವಿ ಮಾಡಿದ್ದಾರೆ. ನಮಗೆ 18 ತಿಂಗಳಿಂದ ವೇತನ ನೀಡಿಲ್ಲ ಆದರೆ ಮಲ್ಯಾ ಬಳಿ ಕ್ರಿಕೆಟ್ ತಂಡಕ್ಕೆ ಮತ್ತು ಫಾಮರ್ುಲಾ ವನ್ ರೇಸ್ಗೆ ಖಚರ್ು ಮಾಡಲು ಕೋಟಿಕೋಟಿ ಹಣವಿದೆ ಎಂದು ದೂರಿರುವ ಉದ್ಯೋಗಿಗಳು, ನಮ್ಮ ಹೂಡಿಕೆಯೆಲ್ಲಾ ಖಾಲಿಯಾಗಿದೆ, ಸಂಬಂಧಿಕರು ಮತ್ತು ಬ್ಯಾಂಕ್ನಲ್ಲಿ ಪಡೆದ ಸಾಲವು ಹೆಚ್ಚುತ್ತಿದೆ ಎಂದಿದ್ದಾರೆ. ವೇತನ ನೀಡದೆ ಸತಾಯಿಸುವ ಮಲ್ಯಾನಂಥ ಕ್ರೂರ ವ್ಯಕ್ತಿಯ ಪರವಾಗಿ ಆಡದಂತೆ ಯುವರಾಜ್ಗೆ ಕೆಲಸಗಾರರು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಯುವರಾಜ್ ಯಾವ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಬಂದಿಲ್ಲ.

mallya1

By suddi9

Leave a Reply

Your email address will not be published. Required fields are marked *