ಸುದ್ದಿ9ಕೈಕಂಬ: ಇವರ ಹೆಸರು ಅರುಣಿಮಾ(26), ಈಕೆಗೆ ಎರಡೂ ಕಾಲುಗಳಿಲ್ಲ. ಆದರೇನಂತೆ? ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಜೀವಂತ ಉದಾಹರಣೆ ಈ ಅರುಣಿಮಾ. ಎರಡು ಕಾಲುಗಳಿಲ್ಲದೆಯೂ ಮೌಂಟ್ ಎವರೆಸ್ಟ್ ಏರಿದ, ಭೂಮಿಯ ಅತ್ಯುನ್ನತ ಶಿಖರ ಶೃಂಗದಲ್ಲಿ ದೇಶದ ತಿರಂಗವನ್ನು ಹಾರಸಿದ ಛಲಗಾರ್ತಿ ಅರುಣಿಮಾ ಸಿನ್ಹ ನಿಜಕ್ಕೂ ಗ್ರೇಟ್.
ಒಮ್ಮೆ ಇವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಬಂದು ಕುತ್ತಿಗೆಯಿಂದ ಸರ ಕಸಿಯಲು ಶುರು ಮಾಡಿದರು. ಪ್ರತಿಭಟಿಸಿದ ಇವರನ್ನು ದುಷ್ಕರ್ಮಿಗಳು ರೈಲಿನಿಂದ ಹೊರದಬ್ಬಿದರು. ಪಕ್ಕದಲ್ಲಿ ಹಾದುಹೋಗುತ್ತಿದ್ದ ರೈಲಿನ ಚಕ್ರಗಳಡಿ ಸಿಲುಕಿ ಅವರೆರಡೂ ಕಾಲುಗಳು ತುಂಡಾದವು. ಕಾಲಿಲ್ಲದೆ ಬಹಳ ಕಷ್ಟಪಡುತ್ತಿದ್ದ ಅರುಣಿಮಾ ಕಣ್ಣಿಗೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಎವರೆಸ್ಟ್ ಕುರಿತ ಲೇಖನ ಅವರನ್ನು ಸೆಳೆಯಿತು.

arunima

ಈ ಮಾತನ್ನು ಕೇಳಿ ಮನೆಯವರು ಅವಕ್ಕಾದರು. ಕೊನೆಗೆ ಅರುಣಿಮಾ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಮನೆಯವರ ಪೈಕಿ ತಾಯಿ, ಸಹೋದರ ಬೆಂಬಲಕ್ಕೆ ನಿಂತರು.
ಎವರೆಸ್ಟ್ ಏರಲು ನೆರವು ಕೇಳಿದಾಗ ಪ್ರಾಯೋಜಕರೆಲ್ಲಾ ನಿನಗೆ ಹುಚ್ಚು ಎಂದು ಹಿಂದೆ ಸರಿದರು. ಕೊನೆಗೆ ಟಾಟಾ ಸ್ಟೀಲ್ ಸಂಸ್ಥೆ ಪ್ರಾಯೋಜಕತ್ವ ನೀಡಿತು. ನಂತರ ಇವರು ಎವರೆಸ್ಟ್ ಏರಿದ್ದ ಮೊದಲ ಮಹಿಳೆ ಬಚೇಂದ್ರಿಪಾಲ್ ಬಳಿ ಮನದಾಸೆ ಹೇಳಿಕೊಂಡಾಗ ಅವರ ಬೆಂಬಲ ದೊರಕಿತು. ಕಾಲಿಲ್ಲದ ಇವರಿಗೆ ಶೆರ್ಪಾ ಹಿಂದೇಟು ಹಾಖಿದ. ಕೊನೆಗೆ ಆತನ ಮನವೊಲಿಸುವಲ್ಲಿಯೂ ಸಫಲರಾದರು. ಎವರೆಸ್ಟ್ ಏರುವ ಪೂರ್ವಭಾವಿ ಶಿಬಿರದಲ್ಲಿ ಒಂದೊಂದು ಹೆಜ್ಜೆ ಇಡುವಾಗಲೂ ಕೃತಕ ಅಂಗ ಜೋಡಿಸಿದ ಭಾಗದಲ್ಲಿ ರಕ್ತ ಸುರಿಯುತಿತ್ತು. ಏನೇ ಆದರೂ ಗುರಿ ಮುಟ್ಟದ ಹೊರತು ಬ್ಯಾಂಡೇಜ್ ಬಿಚ್ಚುವುದಿಲ್ಲ ಎಂದು ಗಟ್ಟಿ ಮನಸ್ಸು ಮಾಡಿದ್ದರು ಅರುಣಿಮಾ.
ಎವರೆಸ್ಟ್ ಹಾದಿಯ ನಾಲ್ಕನೇ ಶಿಬರದ ಕೊನೆಯಲ್ಲಿ ಸಾವಿನ ಹಾದಿ(ಡೆತ್ ಝೋನ್) ಎಂದು ಕರೆಯಲಾಗುವ ಭಾಗದಲ್ಲಿ ಎವರೆಸ್ಟ್ ಏರಲಾಗದೆ ಸತ್ತವರ ಹೆಣಗಳು ಅವರನ್ನು ಸ್ವಾಗತಿಸಿದವು. ಸ್ವಲ್ಪ ಹೊತ್ತಾದ ಬಳಿಕ ಇವರ ದೇಹ ನೀಲಿ ಬಣ್ಣಕ್ಕೆ ತಿರುಗಿತು. ಸಿಲಿಂಡರಲ್ಲಿ ಆಮ್ಲಜನಕ ಖಾಲಿಯಾಗಲಾರಂಭಿಸಿತು. ಶೆರ್ಪಾ ಹಿಂದೆ ಹೋಗಲು ತಿಳಿಸಿದ.
ಕೊನೆಗೆ ಮತ್ತೆ ಕ್ರಮಿಸಿದ ಅರುಣಿಮಾ ಶೃಂಗವನ್ನು ತಲುಪಿಯೇ ಬಿಟ್ಟರು. ಖುಷಿಯಲ್ಲಿ ಎರಡೂ ಕೈಗಳನ್ನೆತ್ತಿ ಕುಣಿದಾಡಿದರು. ಕಡಿದಾದ ಪರ್ವತವನ್ನು ವಿಕಲಚೇತನ ಮಹಿಳೆಯೂ ಏರಬಲ್ಲಲು ಎಂದು ಕೂಗಿ ಹೇಳಿದರು. ಶೆರ್ಪಾ ಎಲ್ಲವನ್ನೂ ವಿಡಿಯೋ ತೆಗೆದ. ಜಗತ್ತು ಈ ವಿಡಿಯೋವನ್ನು ಕಂಡು ಸ್ಪೂರ್ತಿ ಪಡೆಯಲಿ ಎಂದು ಹೇಳಿದರು.
ಬೆಟ್ಟ ಹತ್ತುವುದಕ್ಕಿಂತಲೂ ಇಳಿಯವುದು ಕಠಿಣ. ಇಳಿಯುತ್ತಿದ್ದಂತೆ ಆಮ್ಲಜನಕದ ಸಿಲಿಂಡರ್ ಪೂರ್ತಿಯಾಗಿ ಖಾಲಿಯಾಗಿತ್ತು. ಬದುಕುಳಿಯುವ ಮಾರ್ಗವೇ ಉಳಿಯಲಿಲ್ಲ. ಕೊನೆಗೆ ಬ್ರಿಟಿಷ್ ಯಾನಿಯೊಬ್ಬ ಆಕ್ಸಿಜನ್ ಒದಗಿಸಿದ. ಹೀಗೆ ಕಾಲಿಲ್ಲದೆ ಎವರೆಸ್ಟ್ ಏರಿ ದಾಖಲೆ ಬರೆದರು ಅರುಣಿಮಾ.

By suddi9

Leave a Reply

Your email address will not be published. Required fields are marked *