ಬಜ್ಪೆ : ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಲತಾ ಆರ್ ಕೋಟ್ಯಾನ್ ಅವರು ಹಂಪಿ ವಿಶ್ವವಿದ್ಯಾನಿಲಯದ `ಡೆವಲಪ್ಮೆಂಟ್ ಸ್ಟಡಿ’ ವಿಭಾಗದ ಪೆÇ್ರ. ಡಾ ಸಿದ್ಧಗಂಗಮ್ಮರ ಮಾರ್ಗದರ್ಶನದಲ್ಲಿ ಮಂಡಿಸಿದ `ವಿಮೆನ್ ಇನ್ ಅನ್ಆರ್ಗನೈಸ್ಡ್ ಸೆಕ್ಟರ್ ಆ್ಯಂಡ್ ಪೆÇಲಿಟಿಕಲ್ ಮೊಬಿಲೈಸೇಶನ್-ಸ್ಟಡಿ ಆಫ್ ವಿಮೆನ್ ಡೊಮೆಸ್ಟಿಕ್ ವರ್ಕರ್ಸ್ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್’ ಎಂಬ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾನಿಲಯವು ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ.
ಇವರು ಕೊಂಚಾಡಿಯ ಶ್ರೀನಿವಾಸನಗರದ ದಿ. ಸೋಮಯ್ಯ ಮೇಸ್ತ್ರಿ ಮತ್ತು ಜಯಂತಿ ದಂಪತಿಯ ಪುತ್ರಿಯಗಿದ್ದು, ಕೆಎಂಸಿಯ ಡಾ. ರವೀಂದ್ರ ಕೋಟ್ಯಾನರ ಪತ್ನಿಯಾಗಿದ್ದಾರೆ.

