ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಪ್ರವಾಸದ ದಿನಾಂಕ ನಿಗದಿಯಾಗಿದ್ದು, ಇದೇ ಸೆ.29ರಂದು ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.
ಶ್ವೇತಭವನದಲ್ಲಿನ ಬರಾಕ್ ಒಬಾಮಾ ವಕ್ತಾರರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಸೆ.29 ಮತ್ತು 30ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಒಬಾಮಾ ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ.
ಗುಜರಾರ್ ದಂಗೆಯ ಸಂದರ್ಭ ಮೋದಿಯನ್ನು ನರಹಂತಕ ಎಂದು ಜರೆದಿದ್ದ ಅಮೇರಿಕಾ ಮೋದಿಗೆ ವೀಸಾ ನೀಡಲು ನಿರಾಕರಿಸಿತ್ತು. ಆದರೆ ಪ್ರಧಾನಿಯಾದ ಬಳಿಕ ಮೋದಿಯನ್ನು ದೇಶಕ್ಕೆ ಕರೆಸದೆ ವಿಧಿ ಇಲ್ಲವೆಂದು ತಿಳಿದು ಕೊನೆಗೂ ಅಮೇರಿಕಾ ಮೋದಿ ಆಹ್ವಾನಿಸಲು ವೇದಿಕೆ ಸಜ್ಜು ಮಾಡಿದೆ.

