ಫರಂಗಿಪೇಟೆ: ಸಂಪ್ರದಾಯ ಮತ್ತು ಧರ್ಮ ದ ಆಚಾರ ವಿಚಾರಗಳನ್ನು ಕಾನೂನಿನ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ. ಧರ್ಮ ಎನ್ನುವ ಪದ ಕ್ಕೆ ಸಮಾನವಾದ ಇನ್ನೊಂದು ಪದ ಪ್ರಪಂಚದಲ್ಲೇ ಇಲ್ಲ , ಪ್ರಪಂಚದ ಅದೆಷ್ಟೋ ನಾಗರಿಕತೆಗಳು ಅವಸಾನ ಕಂಡಿದ್ದರೂ ಹಿಂದೂ ಧರ್ಮ , ಹಿಂದೂ ನಾಗರೀಕತೆ ಗೆ ಹುಟ್ಟು ಯಾವಾಗ ಎಂದು ತಿಳಿದವರಿಲ್ಲ , ಇಂತಹ ಶ್ರೇಷ್ಠ ವಾದ ಧರ್ಮ ದ ಚಿಂತನೆ , ಸಂಪ್ರದಾಯ, ಆಚಾರ ವಿಚಾರಗಳಿಗೆ ಅದರದೇ ಆದ ನೆಲೆಗಟ್ಟಿದೆ ಅದನ್ನು ಉಳಿಸಿ ಬೆಳೆಸುವುದು ಅಗತ್ಯ ಎಂದು ಮಂಗಳೂರು ಉತ್ತರ ಶಾಸಕರಾದ ಡಾ ವೈ ಭರತ್ ಶೆಟ್ಟಿ ಹೇಳಿದರು.
ಸಹೋದರ ಸೇವಾ ಸಂಘ ಫರಂಗಿಪೇಟೆ ಇವರ ಆಶ್ರಯದಲ್ಲಿ ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಯ ಲ್ಲಿ ಜರಗುವ ೨೯ ನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

sharada mahothsava
ಶ್ರೀ ರಾಮ ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಜಯರಾಮ್ ಶೇಕ ರವರ ಅದ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ಸಂಚಾಲಕರಾದ ಅರ್ಕುಳ ಗೋವಿಂದ ಶೆಣೈ , ಉದ್ಯಮಿಗಳಾದ ಸಂದೇಶ್ ಶೆಟ್ಟಿ ಕೊಳ್ಕೆ , ನಮ್ಮ ಕುಡ್ಲ ಟಿವಿ ಚಾನೆಲ್ ನ ಮಾಲಕರಾದ ಡಾ ಶಿವಶರಣ್ ಶೆಟ್ಟಿ , ಉತ್ಸವ ಸಮಿತಿ ಅಧ್ಯಕ್ಷರಾದ ಸದಾನಂದ ಅಳ್ವ ತೇವು , ಸಹೋದರ ಸೇವಾ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕುಂಪನಮಜಲು , ಪೊಳಲಿ ಇನ್ಫ್ರಾ ಟೆಕ್ ನ ಮಾಲಕರಾದ ಅರ್ಜುನ್ ಕೆ ಪೂಂಜಾ ಮತ್ತಿತರರು ಉಪಸ್ಥಿತರಿದ್ದರು
ಕಲರ್ಸ್ ಕನ್ನಡ ಚಾನೆಲ್ ನ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ದಲ್ಲಿ ದ್ವಿತೀಯ ಸ್ಥಾನ ಪಡೆದ ಸೂರಜ್ ಮಂಗಳೂರು ಇವರನ್ನು ಸನ್ಮಾನಿಸಲಾಯಿತು , ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಪ್ರಶಸ್ತಿ ಪತ್ರ ವಿತರಿಸಲಾಯಿತು ಅಲ್ಲದೆ ಅಶಕ್ತ ರಿಗೆ ದುರ್ಬಲ ರಿಗೆ ಸಹಾಯಧನ ವಿತರಿಸಲಾಯಿತು
ಕಾರ್ಯಕ್ರಮವನ್ನು ಸಮಿತಿಯ ಸಂಚಾಲಕ ರಾದ ತೇವು ತಾರಾನಾಥ ಕೊಟ್ಟಾರಿ ಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು , ಮಂಟಮೆ ದಿನಕರ ಕರ್ಕೇರ ಮಂಟಮೆ ವಂದಿಸಿದರು , ಶಾಲಾ ಮುಖ್ಯ ಶಿಕ್ಷಕ ದೇವದಾಸ್ ಕೆ ಅರ್ ರವರು ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *