ಮುಲ್ಕಿ: ಲೇಖಕಿಯಾಗಿ ಗುರುತಿಸಿಕೊಂಡಿದ್ದ ಪ್ರಜ್ಞಾ ಜಿಕೆ(೩೨) ಮಂಗಳೂರಿನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಕಿನ್ನಿಗೋಳಿಯ ನಿವೃತ್ತ ಉಪನ್ಯಾಸಕ ಜಿ.ಕೆ. ಭಟ್-ರಾಧಾ ದಂಪತಿ ಪುತ್ರಿಯಾಗಿದ್ದ ಪ್ರಜ್ಞಾ, ಮಂಜೇಶ್ವರ ತಾಲೂಕಿನ ವಾಣಿನಗರದ ಜಯಪ್ರಕಾಶ್ ಎಂಬವರನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದರು.
ಪ್ರಜ್ಞಾ ಅವರ ಅನೇಕ ಕಥೆ, ಲೇಖನಗಳು ನಾಡಿನ ಪ್ರಮುಖ ದಿನಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದವು.
ಮೃತರು ತಂದೆ, ತಾಯಿ, ಪತಿ ಹಾಗೂ ಮೂರು ತಿಂಗಳ ಹಸುಗೂಸನ್ನು ಅಗಲಿದ್ದಾರೆ.

