6kinni kolluru

ಕಿನ್ನಿಗೋಳಿ:  ಗಿಡ ಮರಗಳನ್ನು ನೆಟ್ಟು ಬೆಳೆಸುವುದನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಡಾ. ಆಶಾ ಜ್ಯೋತಿ ರೈ ಕರೆ ನೀಡಿದ್ದಾರೆ.

ಬಳಕುಂಜೆ  ಗ್ರಾಮ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಲ್ಲೂರು ಕವಾತ್ತಾರು, ಆಯೂಷ್ ಇಲಾಖೆ ಮಂಗಳೂರು ಸಹಯೋಗದಲ್ಲಿ ಕೊಲ್ಲೂರಿನ ಆಯೂರ್ವೇದ ಆಸ್ಪತ್ರೆಯಲ್ಲಿ ನಡೆದ ವಿಶ್ವಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಗಿಡ ಮರಗಳಿದ್ದರೆ ನಮಗೆ ಬದುಕಲು ಸಾಧ್ಯ.  ಗಿಡ ಮರಗಳನ್ನು ನೆಟ್ಟು ಬೆಳೆಸುವ ಕಾರ್ಯವನ್ನು ಹವ್ಯಾಸವಾಗಿಸಿದರೆ ಪರಿಸರ ಉಳಿಯಲು ಸಾಧ್ಯ ಎಂದರು.

ಈ ಸಂದರ್ಭ ಆಸ್ಪತ್ರೆಯ ಪರಿಸರದಲ್ಲಿ ಹಲವಾರು ಜೌಷಧೀಯ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯೂಷ್ ಅಧಿಕಾರಿ ಮೊಹಮ್ಮದ್ ಇಕ್ಬಾಲ್, ಡಾ. ನೂರುಲ್ಲಾ, ವಲಯ ಅರಣ್ಯಾಧಿಕಾರಿ ಚಿದಾನಂದ ಐತಪ್ಪ ಸಾಲಿಯಾನ್ ಮತ್ತಿತರರು ಇದ್ದರು.

ವೈದ್ಯಾಧಿಕಾರಿ ಡಾ ಶೋಭಾರಾಣಿ ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *