sslc

ಬಂಟ್ವಾಳ: ತಾಲೂಕಿನ 87  ಪ್ರೌಢಶಾಲೆಗಳಿಂದ ಎಸೆಸೆಲ್ಸಿ ಪರೀಕ್ಷೆಗೆ 5,456 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ 4,425 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 81.10 ಫಲಿತಾಂಶ ದಾಖಲಾಗಿ ರಾಜ್ಯದಲ್ಲಿ 100ನೇ ಸ್ಥಾನ ಪಡೆದಿದೆ. ಒಟ್ಟು ಪರೀಕ್ಷೆಗೆ ಹಾಜರಾದ 2,721 ಮಂದಿ ಹುಡುಗರಲ್ಲಿ 2,054 ಉತ್ತೀರ್ಣರಾಗಿದ್ದು, ಶೇ. 75.48 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 2,735 ಹುಡುಗಿಯರಲ್ಲಿ 2,371 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 86.69 ಫಲಿತಾಂಶ ಪಡೆದು ವಿದ್ಯಾರ್ಥಿನಿಯರು ಅಂಕ ಶೇಕಡಾವಾರು ಲೆಕ್ಕಾಚಾರವಾಗಿ ಮೇಲುಗೈ ಸಾಧಿಸಿದ್ದಾರೆ.

ಶೇ. 100 ಫಲಿತಾಂಶ: ದಿ.ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆ ಆಂಗ್ಲ ಮಾಧ್ಯಮ ವಿಭಾಗ, ಅನುದಾನಿತ ಶಾಲೆ: ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢಶಾಲೆ, ಅನುದಾನ ರಹಿತ: ಮೊಡಂಕಾಪು ಇನ್‌ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆ,  ಎಸ್‌.ವಿ.ಎಸ್‌. ಟೆಂಪಲ್‌ ಆಂಗ್ಲ ಮಾಧ್ಯಮ ಶಾಲೆ,  ತೌಹೀದ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌, ಜೇಸಿ ಆಂಗ್ಲ ಮಾಧ್ಯಮ ಶಾಲೆ ವಿಟ್ಲ, ಜನತಾ ಆಂಗ್ಲ ಮಾಧ್ಯಮ ಶಾಲೆ ಅಡ್ಯನಡ್ಕ ಶೇಕಡಾ ನೂರು ಫಲಿತಾಂಶ ದಾಖಲಿಸಿವೆ.

ಗರಿಷ್ಟ ಅಂಕ: ಇನ್‌ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಜ್ಞಾ ಶೆಟ್ಟಿ 619, ವಿಟ್ಲ ಜೇಸಿಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಮನ್ವಿತಾ 619 ಅಂಕಗಳನ್ನು ಪಡೆದು ಬಂಟ್ವಾಳ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದಾರೆ. ವಿಟ್ಲ ಜೇಸಿಸ್‌ನ ಮರಿಯಮ್ಮತುಲ್‌ ಸಮ್‌ಲಾ 617 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಶ್ರೀ ಸತ್ಯಸಾಯಿ ಲೋಕಸೇವಾ ಹೈಸ್ಕೂಲಿನ ನವೀನ್‌ಕುಮಾರ್‌ ಮಲ್ಲಪ್ಪ ಮಂಗಳಗುಡ್ಡ 616, ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದಾತ್ರಿ ಸೋಮಯಾಜಿ ಬಿ. 616 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿ ಇದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.

ಬೆಳ್ತಂಗಡಿ: ತಾಲೂಕಿನಲ್ಲಿ ಒಟ್ಟು 3,823 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 3,406 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 89.09 ಫಲಿತಾಂಶ ದಾಖಲಾಗಿ ರಾಜ್ಯದಲ್ಲಿ 24ನೇ ಸ್ಥಾನ ಪಡೆದಿದೆ. ಪರೀಕ್ಷೆಗೆ ಹಾಜರಾದ 1,851 ಬಾಲಕರ ಪೈಕಿ 1,601 ಮಂದಿ ಉತ್ತೀರ್ಣರಾಗಿದ್ದಾರೆ. 1,972 ಬಾಲಕಿಯರ ಪೈಕಿ 1,805 ಮಂದಿ ಉತ್ತೀರ್ಣರಾಗಿದ್ದಾರೆ. ಈ ಬಾರಿ 3 ಸರಕಾರಿ ಪ್ರೌಢಶಾಲೆಗಳು ಹಾಗೂ ಒಂದು ವಸತಿ ಶಾಲೆ ಪೂರ್ಣ ಫಲಿತಾಂಶ ದಾಖಲಿಸುವ ಮೂಲಕ ಸಾಧನೆ ಮೆರೆದಿವೆ. ಉಳಿದಂತೆ 7 ಖಾಸಗಿ ಶಾಲೆಗಳಲ್ಲಿ ಪೂರ್ಣ ಫಲಿತಾಂಶ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *