Crime-Car-Mara (1)

ಕಡಬ:  ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡ ಘಟನೆ ನೆಟ್ಟಣದಲ್ಲಿ ನಡೆದಿದೆ.

ಸ್ವಿಫ್ಟ್ ಕಾರು ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದಾಗ ನೆಟ್ಟಣ ಅರಣ್ಯ ಇಲಾಖಾ ಡಿಪೋ ಬಳಿ ಬೃಹತ್‌ ಹಾಲುಮಡ್ಡಿ ಮರವೊಂದು ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಘಟನೆಯಲ್ಲಿ ಕಾರು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದಾರೆ.

ರಸಗೊಬ್ಬರ ವ್ಯಾಪಾರಿ, ಪುತ್ತೂರು ಸಮೀಪದ ಪಾಣಾಜೆ ನಿವಾಸಿ ಉಪೇಂದ್ರ ಬಲ್ಯಾಯ ಅಪಾಯದಿಂದ ಪಾರಾದವರು.

ಮರ್ಧಾಳದಿಂದ ಕೈಕಂಬವರೆಗೆ ರಸ್ತೆ ಬದಿಯಲ್ಲಿ ಹಾಲುಮಡ್ಡಿ ಮರಗಳನ್ನು ಕೊರೆದು ಅಂಟು ತೆಗೆದು ಹಾಗೆಯೇ ಬಿಡುತ್ತಿರುವುದರಿಂದ ಮರಗಳು ಶಿಥಿಲಗೊಂಡು ಮುರಿದು ಬೀಳುತ್ತಿವೆ. ಕಳೆದ ವರ್ಷ ಐತ್ತೂರಿನ ಕಲ್ಲಾಜೆ ಸೇತುವೆ ಬಳಿ ಹಾಲು ಮಡ್ಡಿ ಮರವೊಂದು ವಿದ್ಯುತ್‌ ತಂತಿಯ ಮೇಲೆ ಮುರಿದು ಬಿದ್ದ ಪರಿಣಾಮ ಚಲಿಸುತ್ತಿದ್ದ ಬೈಕಿನ ಮೇಲೆ ವಿದ್ಯುತ್‌ ಕಂಬ ಬಿದ್ದು ಹಿಂಬದಿ ಸವಾರ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದ. ಹಾಲು ಮಡ್ಡಿ ಮರಗಳಿಂದಾಗಿ ಇಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ.

 

By suddi9

Leave a Reply

Your email address will not be published. Required fields are marked *