8464

ಕೈಕಂಬ: ಇಲ್ಲಿನ ಮಳಲಿಯ ಕುಕ್ಕೇರಿಯಲ್ಲಿ ಪತ್ತೆಯಾಗಿದ್ದ ಅನಾರೋಗ್ಯ ಪೀಡಿತ ಗಂಡು ಚಿರತೆ ಗುರುವಾರ ಸಾವುಗೀಡಾಗಿರುವ ಬಗ್ಗೆ ವರದಿಯಾಗಿದೆ.

ಬುಧವಾರ ಕಕ್ಕೂರಿಯ ಪಾದೆ ಸಮೀಪ ಈ ಚಿರತೆ ಗಾಯದ ಗುರುತೊಂದಿಗೆ ನಿತ್ರಾಣ ಸ್ಥಿತಿಯಲ್ಲಿ ಸ್ಥಳೀಯರ ಕಣ್ಣಿಗೆ ಬಿದ್ದಿತ್ತು. ಬಳಿಕ ಸ್ಥಳೀಯರು ಸ್ವತಃ ಚಿರತೆಗೆ ಹಾಲು-ನೀರು ನೀಡಿ ಸಂರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಚಿರತೆ ಪರಿಪೂರ್ಣವಾಗಿ ಎಚ್ಚೆತ್ತು ಕೊಳ್ಳದಿದ್ದರಿಂದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅದರಂತೆ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಚಿರತೆಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆ ನೀಡಿ ಕೊಂಡೊಯಿದಿದ್ದರು. ಚಿರತೆ ಚರ್ಮರೋಗಕ್ಕೆ ತುತ್ತಾಗಿದ್ದರಿಂದ ಇಲಾಖೆಯ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಾವುಗೀಡಾಗಿದೆ ಎಂದು ತಿಳಿದು ಬಂದಿದೆ.

By Suddi9

Leave a Reply

Your email address will not be published. Required fields are marked *