167475-modif

ಬೆಂಗಳೂರು: ಹೌದು,ನೋಟು ಅಮಾನ್ಯಿಕರಣಕ್ಕೆ ಸಂಬಂಧಪಟ್ಟ ಕನ್ನಡ ಚಿತ್ರದಲ್ಲಿ ಮೋದಿ ಅಭಿನಯಸುತ್ತಿದ್ದಾರೆ. ಅದೆಗಪ್ಪಾ ಅಂತೀರಾ? ಕಳೆದ ವರ್ಷ ನಿಮಗೆ ನೆನಪಿರಬಹುದು ಕೇರಳದಲ್ಲಿ ಮೋದಿ ಅವರ ಪ್ರತಿರೂಪ ಹೊಂದುವ ವ್ಯಕ್ತಿಯೊಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.

ಈಗ ಮೋದಿಯವರನ್ನು ಹೋಲುವ ಕೇರಳದ ಎಂಪಿ ರಾಮಚಂದ್ರನ್ ಎನ್ನುವವರು ಈಗ ನೋಟು ನಿಷೇಧದ ಕುರಿತಾದ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ  ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ.ಚಿತ್ರದ ಶೀರ್ಷಿಕೆಯನ್ನು  ‘ಸ್ಟೇಟ್ ಮೆಂಟ್ 8/11’ ಎಂದು ಇಡಲಾಗಿದ್ದು ಅಪ್ಪಿ ಪ್ರಸಾದ್ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರವು ಕಡಿಮೆ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ರಾಮಚಂದ್ರನ್ ಅವರು ಕೇರಳದ ಕಣ್ಣೂರ ಜಿಲ್ಲೆಯ ಪಯ್ಯನ್ನುರ್ ನಿವಾಸಿ ಕಳೆದ ವರ್ಷ ರೈಲ್ವೆ ಸ್ಟೇಷನ್ ನಲ್ಲಿ  ಕಾಲೇಜ್ ವಿದ್ಯಾರ್ಥಿಯೊಬ್ಬನು ಅವರ ಫೋಟೋ ತೆಗೆದು  ‘ರೈಲ್ವೆ ಸ್ಟೇಷನ್ ನಲ್ಲಿ ಪ್ರಧಾನಿ ಮೋದಿ ಎಂದು ಶೀರ್ಷಿಕೆ ನೀಡಿದ್ದರು’ ಇದು ನಂತರ ಸಾಕಷ್ಟು ಸುದ್ದಿ ಮಾಡಿತ್ತು.

By suddi9

Leave a Reply

Your email address will not be published. Required fields are marked *