ಎನ್ ಆರ್ ನಂಜುಂಡೇಗೌಡ ನಿರ್ದೇಶನದ ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಹೆಬ್ಬೆಟ್ ರಾಮಕ್ಕ’ ಚಿತ್ರ ಏ. 27ರಂದು ರಾಜ್ಯಾದಂತ ಬಿಡುಗಡೆಯಾಗುತ್ತಿದೆ.
ಈ ಸಿನೆಮಾದಲ್ಲಿ ಹಿರಿಯ ನಟಿ ತಾರಾ ಅವರು ರಾಮಕ್ಕನಾಗಿ ಅಭಿನಯಿಸಿದ್ದಾರೆ. ಸಿನೆಮಾದಲ್ಲಿ ದೇವರಾಜ್, ಹನುಮಂತೇಗೌಡ್ರು, ನಾಗರಾಜಮೂರ್ತಿ ಮುಂತಾದವರ ಅಭಿನಯವಿದೆ.
ಈ ಸಿನೆಮಾದ ಚಿತ್ರೀಕರಣ ಬೆಂಗಳೂರು, ಚನ್ನಪಟ್ಟಣ ಸುತ್ತ ಮುತ್ತ ನಡೆದಿದ್ದು, ಎಸ್ ಪುಟ್ಟರಾಜು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಪೂರ್ಣಚಂದ್ರ ತೇಜ್ವಸಿ ಸಂಗೀತ ಸಂಯೋಜನೆ ಮಾಡಿದ್ದು, ಬಿ ಸತೀಶ್ ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

