Pettkammi-Certified_Censor

ಚಿತ್ರ ಸಂತೆ: ಕೋಸ್ಟಲ್‌ವುಡ್‌ನ‌ಲ್ಲಿ ವಿಭಿನ್ನ ಕಥೆ ಹಾಗೂ ಹೊಸ ಕಲಾವಿದರ ಜತೆಗೆ ಹೆಣೆದ ವಿನೂತನ ಶೈಲಿಯ ‘ಪೆಟ್‌ಕಮ್ಮಿ’ ತುಳು ಚಿತ್ರವು ಎಲೆಕ್ಷನ್ ಬಿಸಿಯ ನಡುವೆ ತುಳುನಾಡಿನಾದ್ಯಂತ ಬಿಡುಗಡೆಯಾಗುತ್ತಿದೆ.

ತುಳು ಲಿಪಿಯಲ್ಲಿ ತುಳು ಚಿತ್ರದ ಟೈಟಲ್‌ ಮಾಡುವ ಮೂಲಕ ಮೊದಲ ಬಾರಿಗೆ ಸುದ್ದಿಗೆ ಬಂದ ಪೆಟ್‌ ಕಮ್ಮಿ ಚಿತ್ರ ಅನಂತರ ಒಂದೊಂದೇ ರೀತಿಯ ಅವತಾರಗಳ ಮೂಲಕ ಗಮನ ಸೆಳೆಯಿತು.

ಈ ಚಿತ್ರದ ಟ್ರೈಲರ್‌ ಕೂಡ ಹೊಸ ನಿರೀಕ್ಷೆ ಮೂಡಿಸಿದೆ. ಮನುಷ್ಯ ತನ್ನ ಜೀವನ ಮೌಲ್ಯವನ್ನೇ ತಿಳಿಯದೆ ಅರೆಹುಚ್ಚನಂತೆ ಹೇಗೆ ವಿನಾಶದ ಹಾದಿ ಹಿಡಿಯುತ್ತಾನೆ ಎಂಬುದೇ ಚಿತ್ರದ ಸಾರ. ಆರು ಮಂದಿ ಗೆಳೆಯರು ಒಟ್ಟು ಸೇರಿದಾಗ ಏನೆಲ್ಲ ಮಾಡುತ್ತಾರೆ? ಅವರೊಳಗೆ ಏನೆಲ್ಲ ಆಗಲಿದೆ? ಮುಂದೆ ಏನಾಗುತ್ತೆ? ಹೀಗೆ ನೂರೊಂದು ವಿಚಾರಗಳ ಬಗ್ಗೆ ಸಿನೆಮಾ ಬೆಳಕು ಚೆಲ್ಲುತ್ತದೆ.

ಭೂಕಂಪ, ಸುನಾಮಿ, ಬರಗಾಲ, ಹೆಚ್ಚಿದ ತಾಪಮಾನ ಹೀಗೆ ನೂರೊಂದು ಪ್ರಾಕೃತಿಕ ಸಮಸ್ಯೆಯಿಂದ ಜನ ಸತ್ತರೆ ಅದಕ್ಕೆ ಯಾರನ್ನು ಹೊಣೆ ಮಾಡಬೇಕಾದೀತು? ಇರುವ ಮರ ಗಿಡವನ್ನೆಲ್ಲ ಕಡಿದು, ಪರಿಸರವನ್ನೇ ಹಾಳು ಮಾಡುವಾಗ ಈ ಬಗ್ಗೆ ಒಂದಿನಿತು ಬೇಸರ ಪಟ್ಟುಕೊಳ್ಳದ ನಾವು ಪ್ರಾಕೃತಿಕ ವಿಕೋಪದಿಂದ ಸಾವು- ನೋವು ಆದಾಗ ಬೊಬ್ಬೆ ಹಾಕಿ ಕಿರುಚುತ್ತೇವೆ. ಇಂತಹ ಸಂಗತಿಗಳು ನಮಗೆ ಯಾಕೆ ಮುಖ್ಯವಾಗುವುದಿಲ್ಲ ಎಂಬ ಆಶಯವಿರಿಸಿ ‘ಪೆಟ್ಟ್ ಕಮ್ಮಿ’ ರೆಡಿ ಮಾಡಲಾಗಿದೆ ಎಂಬುದು ವಿಶೇಷ.

 

By suddi9

Leave a Reply

Your email address will not be published. Required fields are marked *