WhatsApp-Image-2018-04-28-at-9.02.49-PM

ಮಂಗಳೂರು: ನಗರದ ಬಜಾಲ್ ಗಾಣದ ಬೆಟ್ಟು ಅಮೀನ್ ಕುಟುಂಬಸ್ಥರ ಚಾವಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು.

ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆ ಇಲ್ಲದೇ, ನಾವೆಲ್ಲರೂ ಒಂದಾಗಿ ಬಾಳಬೇಕು ಎಂಬ ಶ್ರೇಷ್ಠ ಸಂದೇಶವನ್ನು ನೀಡಿದ ಪೂಜ್ಯ ನಾರಾಯಣ ಗುರುಗಳ ಹಾದಿಯಲ್ಲಿ ಸಾಗುತ್ತಿರುವುದು ಈ ಸಮಾಜದ ಹಿರಿಮೆ. ಪೂರ್ವಜರ ಕಾಲದಿಂದಲೂ ಬಿಲ್ಲವರು ಶ್ರಮದ ದುಡಿಮೆಯಲ್ಲಿಯೇ ಸ್ವರ್ಗವನ್ನು ಕಾಣುವವರು. ಅದೇ ಅವರ ಹೆಮ್ಮೆ. ಹೀಗಾಗಿಯೇ ಇಂದಿಗೂ ಸತ್ಯ ನ್ಯಾಯ ನೀತಿ ಧರ್ಮಕ್ಕೆ ತಲೆ ಬಾಗುವ ಇವರು ಅಸತ್ಯ, ಅನ್ಯಾಯ, ಅಧರ್ಮದ ವಿರುದ್ಧ ಸೆಟೆದು ನಿಲ್ಲುತ್ತಾರೆ. ಧರ್ಮದ ಉಳಿವಿಗಾಗಿ ಬಿಲ್ಲವರ ಕೊಡುಗೆ ಎಂದೆಂದಿಗೂ ಶ್ರೇಷ್ಠವಾದದ್ದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಯಾದವ್ ಅಮೀನ್,  ಶಿವಾಜಿ ರಾವ್, ದೇವೋಜಿ ರಾವ್, ವೇಣುಗೋಪಾಲ್, ಚಂದ್ರಹಾಸ್, ಪ್ರವೀಣ್, ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *