ramnath

ಹೊಸದಿಲ್ಲಿ: 12 ವರ್ಷದೊಳಗಿನ ಮಕ್ಕಳ ಗಲ್ಲು ಶಿಕ್ಷೆಯ ಆದ್ಯದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಬೆಳಿಗ್ಗೆ ಅಂಕಿತ ಹಾಕುವುದರೊಂದಿಗೆ ಈ ಕಾನೂನು ಇಂದಿನಿಂದಲೇ ಜಾರಿಗೆ ಬರಲಿದೆ.

ನಿನ್ನೆ ಸಚಿವ ಸಂಪುಟದ ಸಭೆಯಲ್ಲಿ ಹೊರಡಿಸಿದ ಸುಗ್ರಿವಾಜ್ಞೆಗೆ ರಾಷ್ಟ್ರಪತಿಗಳು ಇಂದು ಬೆಳಿಗ್ಗೆ ಅಂಕಿತ ಹಾಕಿದ್ದಾರೆ. ಕಥುವಾ ಹಾಗೂ ಸೂರತ್‌ನಲ್ಲಿ ಮಕ್ಕಳ ಮೇಲಿನ ಹಾಗೂ ಉನ್ನಾವ್‌ನ ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳ ವಂತರ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಮೇಲೆ ಅತ್ಯಾಚಾರಿಗಳಿಗೆ ಕಠಿನ ಕಾನೂನಿನ ರಚನೆ ಮಾಡುವ ಒತ್ತಡವಿತ್ತು.

12 ವರ್ಷದೊಳಗಿನ ಮಕ್ಳಳ ಮೇಲೆ ಅತ್ಯಾಚಾರವೆಸಗುವ ಪ್ರಕರಣಗಳ ತನಿಖೆಯನ್ನು ಪೋಲೀಸರು 2 ತಿಂಗಳಲ್ಲಿ ಮುಗಿಸಬೇಕಾಗಿದ್ದು, ನಂತರದ ಎರಡೇ ತಿಂಗಳಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮುಗಿಸಿ ಆರೋಪ ಸಾಬೀತಾದಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸ ಬಹುದಾಗಿದೆ. ಒಂದು ವೇಳೆ ಆರೋಪಿಯು ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಿದಲ್ಲಿ, ಆರು ತಿಂಗಳೊಳಗೆ ಕೋರ್ಟ್ ಮೇಲ್ಮನವಿಯನ್ನು ಇತ್ಯರ್ಥಗೊಳಿಸಬೇಕಾಗುತ್ತದೆ.

By suddi9

Leave a Reply

Your email address will not be published. Required fields are marked *