ಕಾಸರಗೋಡು: ಪೆರ್ಲ ಉಕ್ಕಿನಡ್ಕದಲ್ಲಿರುವ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಇಗರ್ಜಿಯ ಸ್ಮಶಾನದಲ್ಲಿ ಕೆಲ ವಸ್ತುಗಳು ಪತ್ತೆಯಾಗಿದ್ದು, ಮೃತದೇಹದ ದಫನ ಹೊಂಡದ ಮೇಲೆ ಹಾಕಲಾಗಿದ್ದ ಶಿಲುಬೆಗಳನ್ನು ಹಾನಿಗೊಳಿಸಲಾಗಿದೆ.

ಇದು ವಿಘ್ನ ಸಂತೋಷಿಗಳ ಕೈವಾಡವೇ ಅಥವಾ ಸಮಾಜದ್ರೋಹಿಗಳ ಕೈವಾಡವೇ ಎಂಬ ಸಂಶಯ ಇದೀಗ ತಲೆದೋರಿದೆ. ಸೋಮವಾರ ಬೆಳಿಗ್ಗೆ ಸ್ಥಳೀಯರೋರ್ವರು ಗಮನಿಸಿ, ಬಳಿಕ ಇಗರ್ಜಿ ಪಾಲನಾ ಸಮಿತಿ ಪದಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪಾಲನಾ ಸಮಿತಿ ಪದಾಧಿಕಾರಿಗಳು ನೀಡಿದ ಮಾಹಿತಿಯಂತೆ ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ .

ಸ್ಮಶಾನದಲ್ಲಿನ ಏಳು ಹೊಂಡಗಳ ಮೇಲೆ ಅಳವಡಿಸಲಾಗಿದ್ದ ಶಿಲುಬೆಗಳನ್ನು ಕಿತ್ತೆಸೆದು ಪುಡಿ ಮಾಡಲಾಗಿದೆ. ಹೊಂಡದ ಮೇಲೆ ಸಿಯಾಳ ಮತ್ತು ಸೌತೆ ಕಾಯಿ ಮೊದಲಾದವುಗಳನ್ನು ಸಣ್ಣ ಹೊಂಡ ತೆಗೆದು ಇಡಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *