ಕಾಸರಗೋಡು: ಬಸ್ಸೊಂದರ ಅಡಿಗೆ ಸಿಲುಕಿ ಬಾಲಕಿ ಮೃತಪಟ್ಟ ದಾರುಣ ಘಟನೆ ರವಿವಾರ ಸಂಜೆ ಇಲ್ಲಿನ ಕಾಞ೦ಗಾಡ್ ಬಲ್ಲ ಕಡಪ್ಪುರದಲ್ಲಿ ನಡೆದಿದೆ.
ಮಾಣಿಕ್ಕೋತ್ ಕೊಳವಯಲ್ ನಿವಾಸಿ ಖಾಲಿದ್ ದಂಪತಿ ಪುತ್ರ ನಸೀರಾ(7) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.
ನಸೀರಾ ತನ್ನ ತಾಯಿಯೊಂದಿಗೆ ಬಲ್ಲ ಕಡಪ್ಪುರದಲ್ಲಿ ವಿವಾಹ ಸಮಾರಂಭರಕ್ಕೆ ತೆರಳಿದ್ದಳು. ಈ ವೇಳೆ ವಿವಾಹದ ಬಸ್ ಪ್ರಯಾಣಿಕರನ್ನು ಇಳಿಸಿ ಬಳಿಕ ಹಿಂದಕ್ಕೆ ಚಲಿಸುತ್ತಿದ್ದು, ಹಿಂದೆ ನಿಂತದ್ದ ನಸೀರಾ ಆಕಸ್ಮಿಕವಾಗಿ ಬಸ್ಸಿನಡಿಗೆ ಸಿಲುಕಿ ಗಂಭೀರ ಗಾಯಗೊದ್ದಳು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

