47174141

ಉಪ್ಪಳ: ಸರಣಿ ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಇಲ್ಲಿನ ಬಂದ್ಯೋಡು ಸಮೀಪದ ಕುಕ್ಕಾರ್ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

 ಕಯ್ಯರ್ ನಿವಾಸ ಅಭಿಲಾಷ್(25) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

 ಅಭಿಲಾಷ್ ಉಪ್ಪಳದಿಂದ ಬಂದ್ಯೋಡ್ ಕಡೆಗೆ ತೆರಳುತ್ತಿದ್ದ ವೇಳೆ ಬೈಕ್, ಆಟೊ ಟ್ಯಾಕ್ಸಿ ಮತ್ತು ಲಾರಿಗಳ ನಡುವೆ ಸಂಭವಿಸಿದ ರಸ್ತೆ  ಅಪಘಾತದಲ್ಲಿ ಅಭಿಲಾಷ್ ರಸ್ತೆ ಉರುಳಿದಾಗ ಎದುರಿನಿಂದ ಬಂದ ಲಾರಿಯ ಚಕ್ರಕ್ಕೆ ಅವರ ತಲೆಯ ಮೇಲೆ ಸಂಚರಿಸಿದ್ದರಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

By suddi9

Leave a Reply

Your email address will not be published. Required fields are marked *