ಬಡಿಯಡ್ಕ: ಎಯುಪಿ ಶಾಲಾ ಪ್ರವೇಶೋತ್ಸವವು ಬಹಳ ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ನಡೆಯಿತು.
ವಾರ್ಡ್ ಸದಸ್ಯೆ ಶ್ರೀಮತಿ ಪುಷ್ಪ ಭಾಸ್ಕರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಾರ್ಡ್ ಸದಸ್ಯ ಲಕ್ಷ್ಮಿ ನಾರಾಯಣ ಪೈ ಬಳ್ಳಂಬೆಟ್ಟು .ಪಿಟಿಎ ಅಧ್ಯಕ್ಷ ಶ್ರೀ ದಿನೇಶ, ಮಾತೃಸಂಘದ ಅಧ್ಯಕ್ಷೆ ಶ್ಯಾಮಲಾ ಮೊದಲಾದವರು ಶುಭಕೋರಿದರು.
ಹೊಸ ಧಾಖಲಾತಿ ಪಡೆದ ಮಕ್ಕಳನ್ನು ಕಿರೀಟ ಧರಿಸಿ ವೇದಿಕೆಗೆ ಆಮಂತ್ರಿಸಲಾಯಿತು. ಸ್ಲೇಟು,ಬ್ಯಾಗ್, ಮಾಡಲಾದ ಕಲಿಕೋಪಕರಣಗಳನ್ನು ನೀಡಲಾಯಿತು. ಸಿಹಿತಿಂಡಿ ವಿತರಣೆಯ ಬಳಿಕ ಎಲ್ಲಾ ಮಕ್ಕಳು, ಅಧ್ಯಾಪಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮುಖ್ಯೋಪಾಧ್ಯಾಯರಾದ ಮಣಿ ಸ್ವಾಗತಿಸಿ, ಶಾಲಿನಿ ಟೀಚರ್ ವಂದಿಸಿದರು. ಶಿಕ್ಷಕಿ ಮಲ್ಲಿಕ ಕಾರ್ಯಕ್ರಮವನ್ನು ನಿರೂಪಿಸಿದರು.ಹೆತ್ತವರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮವು ಯಶಸ್ಸು ಕಂಡಿತು.


