ಕಾಸರಗೋಡು: ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ತೋಕೆ ನಿವಾಸಿ ಬಡ ಕೂಲಿ ಕಾರ್ಮಿಕ ಹರಿಶ್ಚಂದ್ರ ಶೆಟ್ಟಿಗಾರ ಅವರ ಪತ್ನಿ ಗೀತಾ ಶೆಟ್ಟಿಗಾರ್ ಅವರು ಕಳೆದ ಕೆಲವು ತಿಂಗಳಿನಿಂದ ಬ್ಲಡ್ ಕ್ಯಾನ್ಸರ್ ನಿಂದ ಬಳಲಿತ್ತಿದ್ದು ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

IMG-20180625-WA0039 (1)
ಈಗಾಗಲೇ ಆಸ್ಪತ್ರೆ ಚಿಕಿತ್ಸೆಗಾಗಿ ಹಲವರ ಸಹಾಯ ಪಡೆದು ಸುಮಾರು ಮೂರು ಲಕ್ಷ ರೂ. ವ್ಯಯಿಸಿದ್ದು ಇನ್ನೂ ಚಿಕಿತ್ಸೆ ಮುಂದುವರಿಸಬೇಕಾಗಿದೆ. ಚಿಕಿತ್ಸೆಗೆ ಈ ಬಡ ಕುಟುಂಬಕ್ಕೆ ದಾನಿಗಳ ಸಹಾಯ ಹಸ್ತ ಹೊರತುಪಡಿಸಿ ಬೇರೆ ಯಾವುದೇ ದಾರಿ ಇಲ್ಲ. ಈ ದಂಪತಿಗೆ ಮೂವರು ಮಕ್ಕಳಿದ್ದು ಪಿಯುಸಿ ಕಲಿಯುತ್ತಿದ್ದ ಮಗಳು ತಾಯಿಗಾಗಿ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿದ್ದಾರೆ. ಒಬ್ಬ ಪುತ್ರ ಕೂಡಾ ಐಟಿಐ ಶಿಕ್ಷಣವನ್ನು ತಾಯಿಗೆ ನೆರವಾಗಲೆಂದು ಅರ್ಧಕ್ಕೆ ಮೊಟಕುಗೊಳಿಸಿದ್ದಾನೆ. ಕಿರಿಯ ಪುತ್ರ ಎಂಟನೆಯ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಹಾಗಾಗಿ ಈ ಕುಟುಂಬಕ್ಕೆ ನೆರವಾಗಲು ಬಯಸುವವರು :

ಹರಿಶ್ಚಂದ್ರ ಶೆಟ್ಟಿಗಾರ, ಸಿಂಡಿಕೇಟ್ ಬ್ಯಾಂಕ್, ವರ್ಕಾಡಿ ಸುಂಕದಕಟ್ಟೆ ಶಾಖೆಯA/c no :  : 42282200116816 IFC code :SYNB0004228 ಗೆ ಕಳುಹಿಸಬೇಕಾಗಿ ಕಳಕಳಿಯ ವಿನಂತಿ. ಹರಿಶ್ಚಂದ್ರ ಶೆಟ್ಟಿಗಾರ ಅವರ ಮೊಬೈಲ್ ನಂಬ್ರ: 9164 092820

By suddi9

Leave a Reply

Your email address will not be published. Required fields are marked *