ಅಡ್ಡೂರು: ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರು ಇದರ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಇಲ್ಲಿನ ಫೈವ್ ಸ್ಟಾರ್ ಕ್ರೀಡಾಂಗಣದಲ್ಲಿ ನಡೆಯಿತು.
ಈ ವೇಳೆ 2018-2019ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಬೀಬ್ ಕಟ್ಟಪುಣಿ, ಗೌರವಾಧ್ಯಕ್ಷರಾಗಿ ಜಿ.ಪಂ.ಸದಸ್ಯ ಯು.ಪಿ. ಇಬ್ರಾಹೀಂ, ಉಪಾಧ್ಯಕ್ಷರಾಗಿ ಅಲ್ತಾಫ್ ಗರಡಿ, ಕಾರ್ಯದರ್ಶಿಯಾಗಿ ಅನ್ಸಾರ್, ಜತೆ ಕಾರ್ಯದರ್ಶಿಯಾಗಿ ತಮೀಮ್, ಖಾತೆ ನಿರ್ವಾಹಕರಾಗಿ ಅಬ್ದುಲ್ ಝಿಯಾನ್ ಹಾಗೂ ಸಲಹೆಗಾರರಾಗಿ ಇಲ್ಯಾಸ್ ಅವರನ್ನು ಒಮ್ಮತದಿಂದ ಆಯ್ಕೆಗೊಳಿಸಲಾಯಿತು.
ಮರು ಆಯ್ಕೆಗೊಂಡ ಹಬೀಬ್ ಕಟ್ಟಪುಣಿ: ಫೈವ್ ಸ್ಟಾರ್ ನಲ್ಲಿ ಉತ್ಸಾಹಿ ಯುವಕರನ್ನು ಇನ್ನಷ್ಟು ಸಂಘಟನಾತ್ಮಕಗೊಳಿಸುವಲ್ಲಿ ಹಬೀಬ್ ಅವರು ತನ್ನದೇ ಆದ ಛಾಪು ಮೂಡಿಸಿದ್ದು, ಇದರಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಅಲ್ಲದೆ, ಸಾಮಾಜಿಕ ಕಳಕಳಿಯ ಮನೋಭಾವ ಬೆಳೆಸಿಕೊಂಡಿದ್ದ ಇವರು ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸುವಲ್ಲಿ ಎಂದೂ ಇಂಜರಿದವರಲ್ಲ. ಹೀಗಾಗಿ ಎಲ್ಲ ಸದಸ್ಯರ ಸರ್ವಾನುಮತದಿಂದ ಅವಿರೋಧವಾಗಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಗೊಂಡಿದ್ದಾರೆ.

