1 (3)

ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಯ ವ್ಯಾಪ್ತಿಯ ನರಿಕೊಂಬು ಹಾಗೂ ಪಾಣೆಮಂಗಳೂರು ಗ್ರಾಮಗಳ ಮುಖಂಡರ ಸಭೆ ಇಲ್ಲಿನ ಪಾಣೆಮಂಗಳೂರಿನ ಸುಮಂಗಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಿತು.

ಈ ವೇಳೆ ಮುಂಬರುವ ವಿಧಾನ ಸಭಾ ಚುನಾವಣಾಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ, ಮತ ಚಲಾವಣೆ ಮಾಡಲು ಸೂಕ್ತವಾದ ತಿಳುವಳಿಕೆ ಮೂಡಿಸುವ ಬಗ್ಗೆ ಮಾಹಿತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಪಾತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು.

2 (4)ಸಭೆಯಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆ ಯ ಪಿಎಸ್ಸೈ ಚಂದ್ರಶೇಖರ್,  ಅಪರಾಧ ವಿಭಾಗದ ಪಿಎಸ್ಸೈ ಹರೀಶ್, ಎರಡು ಗ್ರಾಮದ ಬೀಟ್ ಉಸ್ತುವಾರಿ ಎಸ್ಸೈ ಸಂಜೀವ, ಗ್ರಾಮ ಕರಣೀಕ ವಿಜೇತಾ ಬೀಟ್, ಸಿಬ್ಬಂದಿಗಳಾದ ನಾಗರಾಜ, ಜಯಾನಂದ, ನಿರಂಜನ, ಪರಮೇಶ್, ಉಸ್ಮಾನ್, ಪ್ರವೀಣ್ ಹಾಗೂ ಝಮೀರ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *