DZxE3rYX0AAD_fc-300x173

ದಿಲ್ಲಿ: ಪರಿಶಿಷ್ಟ ಜಾತಿ/ ಪಂಗಡಗಳ ಕಾಯ್ದೆ ತಿದ್ದುಪಡಿ ವಿರೋಧಸಿ ವಿವಿಧ ದಲಿತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಭಾರತ ಬಂದ್ ಪ್ರತಿಭಟನೆ ಕೆಲವು   ರಾಜ್ಯಗಳಲ್ಲಿ ಹಿಂಸಾ ರೂಪಕ್ಕೆ ತಿರುಗಿ, ನಾಲ್ವರನ್ನು ಬಲಿ ತೆಗೆದುಕೊಂಡಿದೆ.

ಮುಜಾಪುರನಗರದಲ್ಲಿ ಪ್ರತಿಭಟನೆ ಕಾಲಕ್ಕೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು,  ಹಿಸ್ಸಾರ ಹೊಸದಿಲ್ಲಿ ಹಾಗೂ ಅಂಬಾಲಾ  ಹೊಸದಿಲ್ಲಿ ಪ್ರದೇಶಗಳಲ್ಲಿ ಸಂಚಾರ   ಅಸ್ತವ್ಯಸ್ತಗೊಂಡಿದೆ. ಮಧ್ಯಪ್ರದೇಶದಲ್ಲಿ ಪ್ರತಿಭಟನಾ ಕಾಲಕ್ಕೆ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಮತ್ತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದ  ಗ್ವಾಲಿಯರ್, ಬಿಂದ್, ಮೊರೆನಾ, ಸಾಗರ, ಬಾಲಘಾಟ್ ನಲ್ಲಿ ಪ್ರತಿಭಟನೆ ವೇಳೆ ಕಿಡಿಗೇಡಿಗಳ ಗುಂಪೊಂದು ಗುಂಡು ಹಾರಿಸಿದ  ಪರಿಣಾಮ ನಾಲ್ವರು ಸಾವಿಗೀಡಾಗಿದ್ದಾರೆಂದು ಹೇಳಲಾಗಿದೆ.

ಪ್ರತಿಭಟನೆ ಕಾಲಕ್ಕೆ ನಡೆದ ಹಿಂಸಾಚಾರವನ್ನು ಬಲವಾಗಿ ಖಂಡಿಸಿರುವ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ದೊಂಬಿ  ಎಬ್ಬಿಸುವ ದುಷ್ಟ ಶಕ್ತಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *