ಕೈಕಂಬ: ಧರ್ಮಸ್ಥಳ ಮೇಳದಲ್ಲಿ 43 ವರ್ಷಗಳಿಂದ ಸೇವೆ ಸಲ್ಲಿಸಿ ನಿತ್ಯ ವೇಷಗಳಿಂದ(ಚಿಕ್ಕಪುಟ್ಟ ವೇಷ) ಮೂಲಕ ದೊಡ್ಡ ವೇಷದೊಂದಿಗೆ ದೊಡ್ಡ ಕಲಾವಿದರಾಗಿ ಎತ್ತರಕ್ಕೆ ಏರಿದ ನಿವೃತಿ ಹೊಂದಿದ ಉಮೇಶ್ ಶೆಟ್ಟಿ ಉಬರಡ್ಕ ಅವರನ್ನು ಗುರುಪುರ ಮಾಣಿಬೆಟ್ಟು ಗುತ್ತು ದಿ.ಜಯರಾಮ ಶೆಟ್ಟಿ ಅವರ ಸ್ಮಾರಣಾರ್ಥವಾಗಿ “ಯಜಮಾನ ಪ್ರಶಸ್ತಿ “ ನೀಡಿ ಸನ್ಮಾನಿಸಲಾಯಿತು.

ಗುರುಪುರ ಮಾಣಿಬೆಟ್ಟು ಗುತ್ತಿನಲ್ಲಿ ತಿಟ್ಟು ಮಟ್ಟುಗಳ ಬೇಧವಿಲ್ಲದೆ ಕಳೆದ 29 ವರ್ಷಗಳಿಂದ ಯಕ್ಷಗಾನ ಸೇವೆಯಾಟದ ಸಂದರ್ಭ ಯಕ್ಷಗಾನದಲ್ಲಿ ಸಾಧನೆಗೈದ ಕಲಾವದರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ.ಈ ಸಂದರ್ಭದಲ್ಲಿ ಅಭಿನಂದನಾ ಬಾಷಣ ಮಾಡಿದ ಹಿರಿಯ ಯಕ್ಷಗಾನ ಕಲಾವಿದ ವರ್ಕಾಡಿ ತಾರನಾಥ ಬಲ್ಯಾಯ ಮಾತನಾಡಿ ಒಂದೊಂದು ಕಲಾವಿದರು ದುಶ್ಚಟಗಳಿಗೆ ಬಲಿಯಾಗಿ ತಮ್ಮಕಲಾಜೀವನವನ್ನು ಹಾಳುಗೆಡವಿಕೊಂಡಿದ್ದಾರೆ ಆದರೆ ಉಮೇಶ್ ಉಬರಡ್ಕರವರು ಯಾವುದೇ ಚಟಗಳಿಗೆ ದಾಸರಾಗದೇ ಕಲಾಸೇವೆಯನ್ನು ಕಳೆದ 43 ವರ್ಷಗಳಿಂದ ನಿಷ್ಠೆಯಿಂದ ಮಾಡುತ್ತಿದ್ದಾರೆಇಂತಹ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ಅಭಿನಂದನೀಯ ಎಂದು ಹೇಳಿದರು.
ಪ್ರೇಕ್ಷಕರೊಬ್ಬರು ಚೌಕಿಗೆ ಬಂದು ನಿಮ್ಮ ಪಾತ್ರ ಚೆನ್ನಾಗಿತ್ತು ಎಂದಾಗ ಕಲಾವಿದನಿಗೆ ಸಂತೋಷವಾಗುತ್ತದೆ. ಕಲಾವಿದ ಬೆಳೆಯಬೇಕಿದ್ದರೆ ಆತನನ್ನು ಗುರುತಿಸ ಬೇಕು. ಕಿರಿಯ ಕಲಾವಿದರಿಗೆ ಹಿರಿಯ ಕಲಾವಿದರು ಪ್ರೋತ್ಸಾಹ ನೀಡಿದರೆ ಒಬ್ಬ ಕಲಾವಿದ ಸಾಧನೆಮಾಡಿ ಸಮಾಜದಲ್ಲಿ ಗುರುತಿಸಿ ಕೊಳ್ಳಲು ಸಾಧ್ಯ ಎಂದು ಸನ್ಮಾನ ಸ್ವೀಕರಿಸಿ ಮಾತನಾಡಿದ ಉಮೇಶ್ ಶೆಟ್ಟಿ ಉಬರಡ್ಕ ಹೇಳಿದರು.

ಜಯರಾಮ ಮಂಜಿತ್ತಾಯ ಪದ್ಮನಾಭಕೋಟ್ಯಾನ್, ಸುರೇಂದ್ರ ಕಾಂಬ್ಲಿ,ಮಹೇಶ್ ಶೆಟ್ಟಿ , ವಿನಯ ಕುಮಾರ್ ಶೆಟ್ಟಿ , ಜಗದೀಶ್ ಶೆಟ್ಟಿ ಮತ್ತಿತರರು ಇದ್ದರು ಜನಾರ್ಧನ ಅಮ್ಮುಂಜೆ ನಿರೂಪಿಸಿದರು.
