ಬೆಳ್ಳೂರು: ಬೆಳ್ಳೂರು ದೋಟ ಮೆಂಡನ್ ಕುಟುಂಬಸ್ಥರ ಸ್ಥಾನಿಕರ ಕೋಡಿ ನಾಗಬನದಲ್ಲಿ ರೆಂಜಳ ಗುರುರಾಜ ಉಪಾಧ್ಯಾಯರ ನೇತ್ರತ್ವದಲ್ಲಿ ಮಾ. 30ರಂದು ಶುಕ್ರವಾರ ಬೆಳಗ್ಗೆ 11.20 ಕ್ಕೆ “ನಾಗದೇವರ ಪ್ರತಿಷ್ಠೆ , ಸಾಮೂಹಿಕ ಆಶ್ಲೇಷ ಬಲಿ , ನಾಗತಂಬಿಲ ಮತ್ತು ಕಲಶಾಭಿಷೇಕ.ಪ್ರಸನ್ನ ಪೂಜೆ” ಯು ನಡೆಯಿತು. ಈ ಸಂದರ್ಭದಲ್ಲಿ ಸ್ಥಾನಿಕರ ಕೋಡಿ ದೇವಕಿ ಆರ್. ರೈ ಹಾಗೂ ನಾರ್ಣ ಸಪಲ್ಯ ದೋಟ ಮೆಂಡನ್ ಕುಟುಂಬಿಕರು ಉಪಸ್ಥಿತರಿದ್ದರು.


