ಅಡ್ಡೂರು: ಎಸ್ಕೆಸ್ಸೆಸೆಫ್ ಕಟ್ಟಪುಣಿ ಯುನಿಟ್ ವತಿಯಿಂದ ಇಂದು (ಮಾ.29) ಸಮಸ್ತ ವಿಶದೀಕರಣ ಕ್ಲಾಸ್ ಹಾಗೂ ಉಳ್ಳಾಲ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಮ್ಮೇಳನ ಕಾರ್ಯಕ್ರಮ ಇಲ್ಲಿನ ಕೇಂದ್ರ ಜುಮಾ ಮಸೀದಿಯ ಮದ್ರಸ ಹಾಲ್ ನಲ್ಲಿ ಇಶಾ ನಮಾಝಿನ ಬಳಿಕ ಆಯೋಜಿಸಲಾಗಿದೆ.
ಈ ವೇಳೆ ನಗರದ ಕೇಂದ್ರ ಜುಮಾ ಮಸೀದಿಯ ಮುಖ್ಯ ಖತೀಬ್ ಸ್ವದಖತುಲ್ಲಾ ಫೈಝಿ ಅವರು ಉಪನ್ಯಾಸ ನೀಡಲಿದ್ದು, ಆದ್ದರಿಂದ ಸ್ಥಳೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಎಸ್ಕೆಸ್ಸೆಸೆಫ್ ಕಟ್ಟಪುಣಿ ಯುನಿಟ್ ಅಧ್ಯಕ್ಷ ಮುಸ್ತಫಾ ಕಟ್ಟಪುಣಿ ಹಾಗೂ ಕಾರ್ಯದರ್ಶಿ ಎ.ಕೆ. ಫರಾಝ್ ಕಟ್ಟಪುಣಿ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.

