images

ಹೊಸದಿಲ್ಲಿ: ಕೋಟ್ಯಂತರ ರೂ. ಹಗರಣದ ರೂವಾರಿ ನೀರವ್ ಮೋದಿಯ ಪರಮಾಪ್ತ ಫೈರ್ ಸ್ಟಾರ್  ಗ್ರೂಪ್ ನ  ಉಪಾಧ್ಯಕ್ಷ ಶಾಂ ಸುಂದರ ವಾಡ್ವಾನನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ವಂಚನೆ ಪ್ರಕರಣ ಕುರಿತಂತೆ ಜಾರಿ ನಿರ್ದೇಶನಾಲಯವು ಶನಿವಾರವಷ್ಟೇ  ನೀರವ್ ಮೋದಿ, ಮೆಹುಲ್ ಛೋಕ್ಸಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲು ಮಾಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 251 ಕಡೆ ಶೋಧ ಕಾರ್ಯ ನಡೆಸಲಾಗಿದ್ದು, ಅಪಾರ ಪ್ರಮಾಣದ ವಜ್ರ, ಚಿನ್ನ, ಬೆಲೆಬಾಳುವ  ಕಲ್ಲು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

(ಮೂಲ:  ಎಎನ್ ಐ)

By suddi9

Leave a Reply

Your email address will not be published. Required fields are marked *