ಯಾದಗಿರಿ : ಬಾಲಕಿಯೊಬ್ಬಳು ನೀರಿನ ದಾಹ ತಣಿಸಿಕೊಳ್ಳಲು ನೀರೆಂದು ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ಶಹಾಪುರ ತಾಲೂಕಿನ ತಂಗಡಗಿ ಗ್ರಾಮದಲ್ಲಿ ನಡೆದಿದೆ.
ಗೂಡುಮಾ (16) ಮೃತ ದುರ್ದೈವಿ ಬಾಲಕಿ. ದಾಹ ತಣಿಸಿಕೊಳ್ಳಲು ಗೂಡುಮಾ ನೀರಿನ ಬಾಟಲಿಯಿಂದ ಕುಡಿದಿದ್ದಾಳೆ. ಆದರೆ ಪೋಷಕರು ಮನೆಯಲ್ಲಿ ನೀರಿನ ಬಾಟಲಿಯಲ್ಲಿ ಕೀಟನಾಶಕ ಇಟ್ಟಿರುವ ಅರಿವಿಲ್ಲದೇ ನೀರೆಂದು ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ.
ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

