ಸುದ್ದಿ9 ಕೈಕಂಬ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಉಳ್ಳಾಲದಲ್ಲಿ ನಡೆದ ಮಂಗಳೂರು ತಾಲೂಕು ದಕ್ಷಿಣ ವಲಯ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ನಡೆದ ಥ್ರೋಬಾಲ್ ಪಂದ್ಯಾಟದಲ್ಲಿ ರೋಸಮಿಸ್ತಿಕಾ ಶಾಲೆ ಕಿನ್ನಿಕಂಬಳ ಕೈಕಂಬದ ವಿದ್ಯಾರ್ಥಿ ಗಳು ಪ್ರಥಮ ಸ್ಥಾನವನ್ನು ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಥ್ರೋಬಾಲ್ ಪಂದ್ಯದಲ್ಲಿ ಕಾರ್ತೀಕ್ ತಂಡದ ನಾಯಕನಾಗಿದ್ದು, ಉಳಿದ ತಂಡದ ಕ್ರೀಡಾಪಟುಗಳು ಶರೀಫ್, ಹರ್ಷಿತ್, ನಿತೇಶ್, ಮನೀಷ್, ಪ್ರೀತೇಶ್, ಮುಷರಫ್, ರಂಜಿತ್, ಶರತ್, ಆಶೀರ್, ಸೂರಜ್ ಮತ್ತು ಕಾರ್ತಿಕ್ ಉತ್ತಮವಾಗಿ ಆಡಿ ಪಂದ್ಯವನ್ನು ಯಶಸ್ವಿಯಾಗಿ ಮುನ್ನಡೆಸಿ ಮುಂದಿನ ತಿಂಗಳಲ್ಲಿ ನಡೆಯಲಿರುವ ಜಿಲ್ಲಾಮಟ್ಟ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.
ಮುಖ್ಯೋಪಾಧ್ಯಾಯಿನಿ ಜೋಯಿಲಿನ್, ದೈಹಿಕ ಶಿಕ್ಷಕ ಪ್ರಶಾಂತ್ ಎಚ್. ಉಪಸ್ಥಿತರಿದ್ದರು.

All the best guys