Badagayedapadvu

ಕುಪ್ಪೆಪದವು: ಬುಧವಾರ ಸಂಜೆ ಸಿಡಿಲು ಸಹಿತ ಭಾರೀ ಮಳೆಗೆ ವ್ಯಕ್ತಿಗಳಿಬ್ಬರಿಗೆ ಗಾಯವಾಗಿದ್ದು, ಮನೆಗೆ ಅಪಾರ ಹಾನಿಯಾಗಿದೆ. ಮನೆಯ ಅಡಿಗೆ ಮನೆ, ಗೃಹೋಪಯೋಗಿ ವಸ್ತುಗಳು, ವಯರಿಂಗ್ ಸೇರಿ ಹಾನಿಗೊಂಡಿದ್ದು, ಒಟ್ಟು ನಲ್ವತ್ತು ಸಾವಿರ ರೂ.ನಷ್ಟ ಅಂದಾಜಿಸಲಾಗಿದೆ.

ಬಡಗಎಡಪದವು ಹೊಸಗದ್ದೆ ನಿವಾಸಿ ಚೆನ್ನಪ್ಪ ಗೌಡ(40) ಹಾಗೂ ಪತ್ನಿಗೆ ಗಾಯಗೊಂಡವರಾಗಿದ್ದು, ಗಂಭೀರವಾಗಿ ಗಾಯಗೊಂಡ ಚೆನ್ನಪ್ಪ ಗೌಡರನ್ನು ಮೂಡಬಿದ್ರೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ಸಂಜೆ ಆರರ ಸುಮಾರಿಗೆ ಉಂಟಾದ ಸಿಡಿಲು ಸಹಿತ ಭಾರೀ ಮಳೆಯ ಸಂದರ್ಭ ಚೆನ್ನಪ್ಪ ಗೌಡರು ವಿದ್ಯುತ್ ಮೀಟರ್ ಬಳಿ ಫ್ಯೂಸ್ ತೆಗೆಯಲು ಹೋಗುತ್ತಿದ್ದಂತೆ ದಿಢೀರ್ ಎರಗಿದ ಮಿಂಚು ಸಿಡಿಲಿನಿಂದ ಅವರ ಎದೆ, ಕೈ, ಮುಖದ ಭಾಗಕ್ಕೆ ಗಂಭೀರವಾದ ಗಾಯವಾಗಿದೆ.

Badagayedapadavu

ಇದೇ ಹೊತ್ತಲ್ಲಿ ವಿದ್ಯುತ್ ಅವಘಡದಿಂದ ಮನೆಯೊಳಗಿದ್ದ ಅವರ ಪತ್ನಿಗೂ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸಿಡಿಲು ಮಿಂಚಿನ ರಭಸಕ್ಕೆ ಚೆನ್ನಪ್ಪ ಗೌಡರ ಮನೆಯ ಅಡಿಗೆ ಕೋಣೆ, ಗೃಹೋಪಯೋಗಿ ವಸ್ತುಗಳು, ವಯರಿಂಗ್ ಸೇರಿ ಮನೆಗೆ ಅಪಾರ ಹಾನಿಯುಂಟಾಗಿದ್ದು, ಒಟ್ಟು 40 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಚೆನ್ನಪ್ಪ ಗೌಡರನ್ನು ಮೂಡಬಿದ್ರೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

By Suddi9

Leave a Reply

Your email address will not be published. Required fields are marked *