ದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತೊಂದು ಬಹುಕೋಟಿ ಹಗರಣ ಪತ್ತೆ ಹಚ್ಚಿದ್ದು, ಮುಂಬೈ ಶಾಖೆಯೊಂದರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
9.9 ಕೋಟಿ ರೂ. ಹಗರಣದ ಕುರಿತಂತೆ ಪೊಲೀಸ್ ಠಾಣೆಗ ದೂರು ಸಲ್ಲಿಸಲಾಗಿದೆ. ಪ್ರತಿಷ್ಠಿತ ಆಭರಣ ವ್ಯಾಪಾರಿ ನೀರವ್ ಮೋದಿ, ಹಲವು ಬ್ಯಾಂಕುಗಳಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು 1.77 ಬಿಲಿಯನ್ ಅಮೇರಿಕನ್ ಡಾಲರ್ ನಷ್ಟು ಹಣ ವಂಚಿಸಿರುವ ಪ್ರಕರಣ ಇನ್ನೂ ಚರ್ಚೆಯಲ್ಲಿರುವಾಗಲೇ ಮತ್ತೊಂದು ಹಗರಣ ಹೊರಬಿದ್ದಿರುವುದು ಬ್ಯಾಂಕಿಂಗ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಈ ಸಂಬಂಧ ನೀರವ್ ಮೋದಿ ಹಾಗೂ ಅವರ ಚಿಕ್ಕಪ್ಪ ಮೇಹುಲ್ ಚೋಕ್ಸಿ ವಿರುದ್ಧ ಪ್ರಕರಣ ದಾಖಲಾಗಿದೆ.

