Dhinakaran_mar09-1-300x225

ಚೆನ್ನೈ(ತಮಿಳುನಾಡು): ಟಿಟಿವಿ ದಿನಕರನ್ನ ಹೊಸ ಪಕ್ಷ ಕಟ್ಟಿದ್ದು ಒಳ್ಳೆಯದೇ ಆಯಿತು ಎಂದು ಆಲ್ ಇಂಡಿಯಾ ಅಣ್ಣಾ  ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಶಾಸಕ ಜಯಕುಮಾರ್ ಗುರುವಾರ  ಕುಟುಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದೊಂದು ಸೊಳ್ಳೆ. ಅದು ಯಾವಾಗ  ಬಂತು? ಯಾವಾಗ ಹಾರಿ ಹೋಯಿತು ? ಎಂಬುದು ಯಾರಿಗೂ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ಅದು ನಮ್ಮ ಪಕ್ಷಕ್ಕೆ “ಶನಿ’ ಯಾಗಿತ್ತು. ಆ ಶನಿ ಈಗ ತೊಲಗಿದೆ ಎಂದು ಅವರು ಹೇಳಿದರು.

ಗುರುವಾರ ಬೆಳಗ್ಗೆಯಷ್ಟೇ ದಿನಕರನ್ ಅವರು ಹೊಸ ಪಕ್ಷ ರಚನೆ ಘೋಷಿಸಿದ್ದರು. ಅಮ್ಮಾ ಮಕ್ಕಳ ಮುನ್ನೇತ್ರ ಕಳಗಂ ಎಂದು ಅದಕ್ಕೆ ಹೆಸರಿಟ್ಟುದಾಗಿಯೂ ಅವರು ಹೇಳಿಕೊಂಡಿದ್ದರು. ಕಳೆದ ಡಿಸೆಂಬರ ನಲ್ಲಿ ಎಐಎಡಿಎಂ ಕೆ ಪಕ್ಷದಿಂದ ಹೊರ ಬಿದ್ದಿದ್ದ ದಿನಕರನ್, ಈ ಮೊದಲು ಜಯಲಲಿತಾ ಪ್ರತಿನಿಧಿಸುತ್ತಿದ್ದ  ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ  ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.

By Suddi9

Leave a Reply

Your email address will not be published. Required fields are marked *