Related image

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ದೇಶದ ಶೇಖಡ 95ರಷ್ಟು ಭಾಗದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ನಾಗಪುರದಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾದ ವೇಳೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಚ್ಚರಿಯ ಅಂಶಗಳಿದ್ದು ಆರ್‌ಎಸ್‌ಎಸ್ ಈಗ ದೇಶದಲ್ಲಿ 58,976 ಶಾಖೆಗಳನ್ನು ಹೊಂದಿದೆ.

ನಾಗಾಲ್ಯಾಂಡ್, ಮಿಜೋರಂ ಹಾಗೂ ಕಾಶ್ಮೀರ ಕಣಿವೆಯಂಥ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ದೇಶದ ಮಿಕ್ಕೆಲ್ಲ ಸ್ಥಳಗಳಲ್ಲಿ ಸಂಘದ ಶಾಖೆಗಳು ವ್ಯಾಪಿಸಿವೆ ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ ಹೇಳಿದ್ದಾರೆ.

2004ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಪತನಗೊಂಡ ನಂತರ ಆರ್‌ಎಸ್‌ಎಸ್ ಚಟುವಟಿಕೆಗಳು ಮಂಕಾಗಿದ್ದವು ಹಾಗೂ ಸುಮಾರು 10 ಸಾವಿರದಷ್ಟು ಶಾಖೆಗಳು ಬಂದ್ ಆಗಿದ್ದವು. ಆದರೆ 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಶಾಖೆಗಳ ಸಂಖ್ಯೆ 40 ಸಾವಿರದಷ್ಟು ಏರಿಕೆಯಾಗಿದೆ.

ಇನ್ನು ಸರ್ಕಾರಿ ಸ್ವಾಮ್ಯದ ಆಕಾಶವಾಣಿ(ಆಲ್ ಇಂಡಿಯಾ ರೇಡಿಯೋ) ದೇಶದಲ್ಲಿ 262 ನಿಲಯಗಳನ್ನು ಹೊಂದಿದೆ ಹಾಗೂ ದೇಶದ ಶೇ.92ರಷ್ಟು ಭಾಗದಲ್ಲಿ ಪ್ರಸಾರಗೊಳ್ಳುತ್ತದೆ. ಈಗ ಆರ್‌ಎಸ್‌ಎಸ್ ಶೇ.95 ವ್ಯಾಪ್ತಿ ಹೊಂದುವ ಮೂಲಕ ಆಕಾಶವಾಣಿಯನ್ನೂ ಮೀರಿಸಿದೆ.

By suddi9

Leave a Reply

Your email address will not be published. Required fields are marked *