8cab810a-5bd7-485b-a776-9de73fd38c50

ಗುರುಪುರ-ಕೈಕಂಬ: ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ವತಿಯಿಂದ ಮಾ.12ರಂದು “ಅಧ್ಯಾತ್ಮಿಕ ಮಜ್ಲಿಸುನ್ನೂರ್ ಉದ್ಘಾಟನೆ ಹಾಗೂ ಏಕದಿನ ಪ್ರಭಾಷಣ ಕಾರ್ಯಕ್ರಮ  ಇಲ್ಲಿನ ಮೆಗಾ ಫ್ಲಾಝಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಅಂದು ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಮಸ್ತ ಕೇರಳ ಜಂಯ್ಯಾತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್ ಹಾಗೂ ಮಜ್ಲಿಸುನ್ನೂರ್ ನೇತೃತ್ವವನ್ನು ಕೇರಳದ ತಾನೂರಿನ ಅಸಯ್ಯದ್ ಫಕ್ರುದ್ದೀನ್ ತಂಙಳ್ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಖ್ಯಾತ ವಾಗ್ಮಿ, ಖುರ್ ಆನ್ ಪಂಡಿತ ಉಸ್ತಾದ್ ರಹ್ ಮತುಲ್ಲ ಅಲ್ ಖಾಸಿಮಿ ಮತ್ತೇಡಂ ಭಾಗವಹಿಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *