ಮುಂಬಯಿ: ಗುಜರಾತ್ ಬಿಲ್ಲವರ ಸಂಘ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ಮನೋಜ್ ಸಿ.ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.001

ಮಹಾಸಭೆಯ ಅಧ್ಯಕ್ಷತೆಯನ್ನು ಬೈದಶ್ರೀ ಸಂಘದ ಗೌರವಾಧ್ಯಕ್ಷ   ದಯಾನಂದ ಬೋಂಟ್ರಾ ವಹಿಸಿದ್ದರು .  ಶನಿವಾರ   ಬೈದಶ್ರೀ ಸಭಾಂಗಣದಲ್ಲಿ ನಡೆದ ವಿಶೇಷ  ಮಹಾಸಭೆಯಲ್ಲಿ  ಮನೋಜ್ ಸಿ.ಪೂಜಾರಿ  ಅವರನ್ನು  ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

 ಮನೋಜ್ ಸಿ.ಪೂಜಾರಿ ಅವರು ಕಾರ್ಕಳ ತಾಲೂಕಿನ ಮುದ್ರಾಡಿ ಚಂದು ಪೂಜಾರಿ ಮತ್ತು ಕಮಲ ಪೂಜಾರಿ ಅವರ ಸುಪುತ್ರರಾಗಿದ್ದು, ಗುಜರಾತ್ ಬಿಲ್ಲವರ ಸಂಘ ಇದರ ಉಪಾಧ್ಯಕ್ಷ, ಸೂರತ್ ಕನ್ನಡ ಸಮಾಜದ ಅಧ್ಯಕ್ಷರಾಗಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.

ವಾಸು ಪೂಜಾರಿ ಮತ್ತು ಲಕ್ಷ್ಮಣ್ ಪೂಜಾರಿ ಅವರನ್ನು ಉಪಾಧ್ಯಕ್ಷರನ್ನಾಗಿ, ಮೋಹನ್ ಸಿ.ಪೂಜಾರಿ ಅವರನ್ನು ಗೌರವ ಸಲಹೆಗಾರರಾಗಿ ಆಯ್ಕೆಗೊಳಿಸಲಾಯಿತು. ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ಮುಂದಿನ ಎರಡು ವರ್ಷಗಳಿಗೆ ಮುಂದುವರಿಸಲಾಗುವುದು ಎಂದು ನಿರ್ಧರಿಸಲಾಯಿತು.

ಎಸ್.ಕೆ ಹಳೆಯಂಗಡಿ, ವಿ.ಡಿ ಅಮೀನ್, ಮನೋಜ್ ಎಂ.ಪೂಜಾರಿ, ಲೋಕಯ ಪೂಜಾರಿ, ಮನೋಜ್ ಸಿ.ಪೂಜಾರಿ, ವಿಶ್ವನಾಥ್ ಪೂಜಾರಿ, ವಾಸು ಪೂಜಾರಿ, ಜಿನ್‍ರಾಜ್ ಪೂಜಾರಿ ಹಾಗೂ ವಿ.ವಿ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *