ಮುಂಬಯಿ: ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜ್‌ನ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾಥಿಗಳಿಗೆ ದವಳತ್ರಯ ಜೈನಕಾಶಿ ಟ್ರಸ್ಟ್ ಹಾಗೂ ಮೂಡಬಿದ್ರಿ ಜೈನ ಮಠ ಟ್ರಸ್ಟ್ ಸಹಯೋಗದಲ್ಲಿ ಹುಬ್ಬಳ್ಳಿ ಇಂದ್ರ ಕುಮಾರ್ ಸಹಕಾರದಲ್ಲಿ ಉಚಿತವಾಗಿ ನೀಡಿದ ಪುಸ್ತಕಗಳನ್ನು ಸ್ವಸ್ತಿಶ್ರೀ ಕಾಲೇಜುವಿನ ಎಲ್ಲಾ ವಿದ್ಯಾಥಿಗಳಿಗೆ ಕಳೆದ ಶುಕ್ರವಾರ (ಜೂ.೧೨) ಶ್ರೀ ಮಠದಲ್ಲಿ ಮಧ್ಯಾಹ್ನ   ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜ್‌ನ ಅಧ್ಯಕ್ಷ ಶ್ರೀ  ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಗೌರವ ಉಪಸ್ಥಿತಿಯಲ್ಲಿದ್ದು  ಆಶೀರ್ವಾದ  ನೀಡಿ ಶಿಕ್ಷಣದ ಮಹತ್ವ ಅರಿತು ಕಲಿತು ಉತ್ತಮ ವಿದ್ಯಾಥಿಗಳಾಗಿ ಎಂದು ಅನುಗ್ರಹಿಸಿ ಬರೆಯುವ ಪುಸ್ತಕಗಳನ್ನು ವಿತರಿಸಿದರು ಹಾಗೂ ಶಿಕ್ಷಣಪ್ರೇಮಿ, ಕೊಡುಗೈದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕೆನರಾ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಶಂಭವ ಕುಮಾರ್ ಮೂಡುಬಿದಿರೆ ಇವರು ಅತಿಥಿಯಾಗಿದ್ದು  ವಿದ್ಯಾಥಿಗಳಿಗೆ ಪುಸ್ತಕಗಳನ್ನ ವಿತರಿಸಿ ಶುಭಾರೈಸಿದರು.ಕಾಲೇಜ್‌ನ ಪ್ರಾಂಶುಪಾಲೆ ಸೌಮ್ಯಶ್ರೀ, ಉಪನ್ಯಾಸಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *