ಉಡುಪಿ: ಒಗ್ಗಟ್ಟು ಮತ್ತು ಜಾಗೃತಿಯಿಂದ ಒಂದು ಒಂದು ಸಮುದಾಯದ ಇಂತಹ ಅಧಿವೇಶನದಿಂದ ಭೌಗೋಳಿಕವಾಗಿ ಹಂಚಿಹೋಗಿರುವ ಸಮುದಾಯ ಬಾಂಧವರನ್ನು ಒಂದೇ ಸೂರಿನಡಿ ತರಲು ನೆರವಾಗುವುದು. ನಮ್ಮಲ್ಲಿನ ಹಕ್ಕುಗಳು ಮತ್ತು ಅಸ್ತಿತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ತರ ಬದಲಾವಣೆಗೆ ಪೂರಕವಾಗುತ್ತವೆ. ತಳಮಟ್ಟದಿಂದಲೇ ಸಭೆಗಳನ್ನು ನಡೆಸಿ ಸಂಘಟನೆ ಬಲಪಡಿಸುವುದರಿಂದ, ಸಮುದಾಯದ ಕಟ್ಟಕಡೆಯ ವ್ಯಕ್ತಿಯೂ ಧ್ವನಿಯಾಗುತ್ತನೆ ಮತ್ತು ತಳಮಟ್ಟದ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಲು ಮಹಾಧಿವೇಶನಗಳಿಂದ ಸಾಧ್ಯವಾಗುತ್ತದೆ. ಆ ಮೂಲಕ ತಳಮಟ್ಟದ ಸಬಲೀಕರಣದಿಂದ ಸಮುದಾಯ ಮತ್ತಷ್ಟು ಬಲಾಢ್ಯವಾಗುವುದು. ಚಿಕ್ಕ ಸಮುದಾಯದ ಅಧಿವೇಶನದ ಅಗತ್ಯತೆ ಮತ್ತು ಇದರಿಂದ ಆಗುವ ಪ್ರಯೋಜನಕ್ಕೆ  ದೇವಡಿಗರೆಲ್ಲರ ಸಹಕಾರ ಅತ್ಯವಶ್ಯ ಎಂದು ವಿಶ್ವ ದೇವಾಡಿಗ ಮಹಾ ಮಂಡಳ ಇದರ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ತಿಳಿಸಿದರು.


ಬರುವ ಡಿ.20ನೇ ಆದಿತ್ಯವಾರ ಉಡುಪಿಯಲ್ಲಿ ಆಯೋಜಿಸಲಾಗಿರುವ ದೇವಾಡಿಗ ಮಹಾಧಿವೇಶನ-2026 ಇದರ ಪೂರ್ವಭಾವಿ ಸಭೆಯು ದೇವಾಡಿಗ ಸಮಾಜ ಸೇವಾ ಸಂಘ (ರಿ.) ಪಾವಂಜೆ ಇದರ ಸಭಾಂಗಣದಲ್ಲಿ ಕಳೆದ ಭಾನುವಾರ (ಜು.21) ನಡೆಸಲಾಗಿದ್ದು ಸಭಾಧ್ಯಕ್ಷತೆ ವಹಿಸಿ ಧರ್ಮಪಾಲ್ ದೇವಾಡಿಗ ಮಾತನಾಡಿ ಅಧಿವೇಶನಗಳ ಮೂಲಕ ಮಹಿಳೆಯರಿಗೆ ಮತ್ತು ಯುವಕರಿಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸೂಕ್ತ ವೇದಿಕೆ ದೊರೆಯುವುದು. ಯುವಶಕ್ತಿ ಸಮುದಾಯದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ. ಮಾತ್ರವಲ್ಲದೆ ಸ್ವಸಮುದಾಯದ ಸಾಂಸ್ಕೃತಿಕ ಮತ್ತು ಸಾಮಾಜಿಕ ಗುರುತು,  ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆಯನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸಲು ಇಂತಹ ಮಹಾಸಭೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದರು

  ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷ ರವಿ ಎಸ್.ದೇವಾಡಿಗ ಮುಖ್ಯ ಅತಿಥಿಯಾ ಉಪಸ್ಥಿತರಿದ್ದು, ಪ್ರಸಕ್ತ ಕಾಲಘಟ್ಟದಲ್ಲಿ ನಮ್ಮಲ್ಲಿ ಬದುಕಲು ಹಣ ಬಲ ಒಂದಿದ್ದರೆ ಸಾಲದು ಜನ ಬಲವೂ ಮುಖ್ಯವಾಗಿ ಬೇಕಾಗಿದೆ. ಸಮುದಾಯದಲ್ಲಿ ಕೇವಲ ಆಥಿಕ ಸದೃಢತೆ ಇದ್ದರೆ ಸಾಲದು, ಬದಲಿಗೆ ಬಲಿಷ್ಠ  ಜನಬಲ ಇದ್ದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಹಾಗೂ ತಮಗೆ ಸಿಗಬೇಕಾದ ಸಾಮಾಜಿಕ ನ್ಯಾಯವನ್ನು ಯಶಸ್ವಿಯಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ವಿವಿಧ ಉಪ-ಸಮಿತಿಗಳನ್ನು ರಚಿಸುವ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಉದ್ಯಮ ರಂಗದಲ್ಲಿ ಸಮುದಾಯದ ಅಭಿವೃದ್ಧಿಗೆ ಅಗತ್ಯವಿರುವ ದೀರ್ಘಕಾಲದ ಯೋಜನೆಗಳನ್ನು ರೂಪಿಸಲು ಇಂತಹ ಅಧಿವೇಶನಗಳು ಸಹಕಾರಿಯಾಗಿವೆ ಇದನ್ನು ದೇವಡಿಗರಲ್ಲಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.

ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರು ಮಾತನಾಡುತ್ತಾ ಸಂಘಟನೆ ದೃಢವಾಗಿ ಕೆಲಸ ಮಾಡಲು ವಿವಿಧ ಉಪ ಸಮಿತಿಗಳನ್ನು ಮಾಡಬೇಕಾದ ಅಗತ್ಯತೆಯನ್ನು ತಿಳಿಸಿದರು.

ಉಡುಪಿ ನಗರಸಭೆ ಮಾಜಿ ಸದಸ್ಯ ವಿಜಯ ಕೊಡವೂರು ಮಾತನಾಡಿ ಗ್ರಾಮ ಸಭೆಗಳನ್ನು ರಚಿಸಿ ತಳಮಟ್ಟದಿಂದಲೇ ಸಂಘಟನೆ ಪುಷ್ಟಿಕರಿಸುವ ಬಗ್ಗೆ ವಿವರಿಸಿದರು.

ದೇವಾಡಿಗ ಸಂಘ ಪಾವಂಜೆ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ ಜನಾರ್ದನ್ ಉಪಸ್ಥಿತರಿದ್ದು, ಸಭೆಯಲ್ಲಿ ಉಡುಪಿ, ಉದ್ಯಾವರ, ಕಟಪಾಡಿ, ಕಾಪು, ಉಚ್ಚಿಲ, ಪಡುಬಿದ್ರೆ, ಎರ್ಮಾಳು, ಎಲ್ಲೂರು, ಬೆಳ್ಮಾಣ್, ಬಂಟಕಲ್ಲು, ಪಲಿಮಾರು, ಹೆಜಮಾಡಿ, ಮೂಲ್ಕಿ, ಪಾವಂಜೆ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.
ದೇವಾಡಿಗ ಸಂಘ ಪಾವಂಜೆ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ, ದೇವಾಡಿಗ ಸಂಘ ಉಡುಪಿ ಅಧ್ಯಕ್ಷ ರತ್ನಾಕರ್ ಜಿ.ಎಸ್, ದೇವಾಡಿಗ ಸಂಘ ಮಂಗಳೂರು ಅಧ್ಯಕ್ಷ ಶ್ರೀ ಅಶೋಕ್ ಮೊಯಿಲಿ ಹಾಗೂ ಉಪಸ್ಥಿತ ಸಂಘದ ಅಧ್ಯಕ್ಷರುಗಳು ತಮ್ಮತಮ್ಮ ಅನಿಸಿಕೆಗಳನ್ನು ಮಂಡಿಸಿದರು.

ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಜಯಶ್ರೀ ಯಾದವ್ ಅವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಇದರ ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷ ಯಾದವ ದೇವಾಡಿಗ ಸ್ವಾಗತಿಸಿದರು. ಸಭೆಯಲ್ಲಿ ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ಪರವಾಗಿ ಧರ್ಮಪಾಲ್ ಯು.ದೇವಾಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಶ್ವ ದೇವಾಡಿಗ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಗಣೇಶ್ ದೇವಾಡಿಗ ಅಂಬಲಪಾಡಿ ಪ್ರಸ್ತಾವನೆಗೈದರು. ಸಂಘದ ನಿಕಟಪೂರ್ವ ಅಧ್ಯಕ್ಷ ರಾಮದಾಸ್ ಪಾವಂಜೆ ಸಭಾ ಕಲಾಪ ನಿರ್ವಹಿಸಿದರು. ಪಾವಂಜೆ ಸಂಘದ ಉಪಾಧ್ಯಕ್ಷ ಸತೀಶ್ ಇಂದಿರಾನಗರ ಧನ್ಯವದಿಸಿದರು.

By Suddi9

Leave a Reply

Your email address will not be published. Required fields are marked *