ಮುಂಬಯಿ : ಮೂಲತಃ ಉಪ್ಪಿನಂಗಡಿಯಬಜತ್ತೂರು ನಿವಾಸಿಯಾದ ಉಜಿರೆಯ ಎಸ್.ಡಿ.ಎಂ. ಕಾಲೇಜಿನನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೋ | ಬಿ.ರಾಧಾಕೃಷ್ಣ (74) ಅಲ್ಪ ಕಾಲದ
ಅನಾರೋಗ್ಯದ ಬಳಿಕ ಭಾನುವಾರ ಬೆಂಗಳೂರುನಲ್ಲಿ ಖಾಸಗಿಆಸ್ಪತ್ರೆಯಲ್ಲಿ ನಿಧನರಾದರು.
1966ರಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜು ಪ್ರಾರಂಭವಾದಾಗಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇರಿದ ಅವರು ವಿಭಾಗ ಮುಖ್ಯಸ್ಥರಾಗಿ 36ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತಿಯಬಳಿಕ ಅವರು ಪುತ್ತೂರಿನಲ್ಲಿ ವಾಸ್ತವ್ಯ ಇದ್ದರು. ಅವರು ಪತ್ನಿ, ಒಬ್ಬ ಮಗಮತ್ತು ಒಬ್ಬಳು ಮಗಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ
