ಬಂಟ್ವಾಳ: ಸಮುದಾಯದ ಸಹಭಾಗಿತ್ವದಲ್ಲಿ ಹತ್ತು ಹಲವು ವಿನೂತನ ಪ್ರಯೋಗಗಳ ಅನುಷ್ಠಾನದೊಂದಿಗೆ ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗಿಂತಲೂ ಮಿಗಿಲಾಗಿ ಯಾವ ರೀತಿ ಅಭಿವೃದ್ಧಿ ಪಡಿಸಬಹುದೆಂದು ತೋರಿಸಿಕೊಟ್ಟವರು ರಮೇಶ್ ನಾಯಕ್ ಅವರು. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ, ಶಾಲೆಯನ್ನು ರಾಷ್ಟ್ರಕ್ಕೆ ಮಾದರಿಯಾಗಿ ರೂಪಿಸಿ,  ಪೋಷಕರು, ಶಿಕ್ಷಕ ವೃಂದ, ಮಕ್ಕಳು ಹಾಗೂ ಜನಸಮುದಾಯದ ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾದ ಅವರು ಅಭಿನಂದನೀಯರು ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.0503pkt3

ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸ.ಹಿ.ಪ್ರಾ.ಶಾಲೆಯಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ನಿವೃತ್ತ ಮುಖ್ಯ ಶಿಕ್ಷಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿದ್ಯಾರತ್ನ ಕೆ. ರಮೇಶ್ ನಾಯಕ್ ಅವರಿಗೆ ಗುರುವಂದನೆ, ಸಮ್ಮಾನ ನಡೆಸಿ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕರ್ತವ್ಯವನ್ನು ಸವಾಲಾಗಿ ಸ್ವೀಕರಿಸಿ, ಅದರಲ್ಲಿ ಸಾರ್ಥಕತೆ ಪಡೆದ ರಮೇಶ್ ನಾಯಕ್ ಅವರ ಶ್ರದ್ಧೆ, ಪರಿಶ್ರಮ ಇತರರರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.

0503pkt2

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಅಭಿನಂದನಾ ಭಾಷಣ ಮಾಡಿ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ನಮ್ಮೂರಿನ ಹೆಸರನ್ನು ಬೆಳಗಿದ ರಮೇಶ್ ನಾಯಕರು ತುಳುನಾಡಿನ, ಕರ್ನಾಟಕದ ಪುತ್ರ ಎಂಬ ಹೆಮ್ಮೆ ನಮ್ಮದು. ಮಕ್ಕಳನ್ನು ಮಾತ್ರವಲ್ಲ ಒಡನಾಡಿ ಶಿಕ್ಷಕರನ್ನೂ ತನ್ನೊಂದಿಗೆ ಮೇಲ್ಮಟ್ಟಕ್ಕೇರಿಸಿದ ಮಾದರಿ ಶಿಕ್ಷಕ ರಮೇಶ್ ನಾಯಕರ ಕೊಡುಗೆ ಅಮೋಘವಾದುದು ಎಂದು ಹೇಳಿದರು.ಸಮ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ನಾಯಕ್ ಅವರು, ಜನರ , ಸಹ ಶಿಕ್ಷಕರ, ಇಲಾಖೆಯ ಸಂಪೂರ್ಣ ಬೆಂಬಲ ದೊರಕಿದ ಕಾರಣ ಸಾಧನೆಯ ಸಾಕಾರವಾಗಿದೆ. ಉತ್ತಮ ಶಿಕ್ಷಣ ದಿಂದ ಉತ್ತಮ ಸಮಾಜ ನಿರ್ಮಾಣವಾಗುವುದು ಎಂದರು.

ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಜಿ.ಪಂ.ಸದಸ್ಯ ಬಿ.ಪದ್ಮ ಶೇಖರ ಜೈನ್, ಬಂಟ್ಟಾಳ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಪೂಂಜ, ಶಿಕ್ಷಣ ಸಂಯೋಜಕಿ ಸುಜಾತಾ, ಯುವಜನ ಸೇವಾ ಮತ್ತು ಕ್ರೀಡಾ„ಕಾರಿ ನವೀನ್ ಪಿ.ಎಸ್., ಉದ್ಯಮಿಗಳಾದ ದೇವಸ್ಯ ಪುರುಷೋತ್ತಮ ಗೌಡ , ವಾಸುದೇವ್ ಭಟ್ ಕುಂಜತ್ತೋಡಿ, ಹೇಮಂತ್ ಕುಮಾರ್ ಮೂರ್ಜೆ, ನಿವೃತ್ತ ತಹಶೀಲ್ದಾರ ಲೋಕೇಶ್ ಪೂಜಾರಿ, ದ.ಕ.ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್ ಭಟ್, ಬಂಟ್ವಾಳ ಸರಕಾರಿ ನೌಕರರ ಸಂಘದ ಅಧ್ಯಕ್ಷರ ಉಮಾನಾಥ ರೈ ಮೇರಾವು , ಬಂಟ್ವಾಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕಾವಳಮೂಡೂರು ಗ್ರಾ.ಪಂ. ಸದಸ್ಯ ಸತೀಶ್ ಪೂಜಾರಿ ಪಡಂತ್ರಬೆಟ್ಟು, ನಮ್ಮ ಕನಸಿನ ಶಾಲೆ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ವಿಟ್ಲ ಅಧ್ಯಾಪಕರ ಸಹಕಾರಿ ಬ್ಯಾಂಕ್ ಪ್ರಬಂಧಕ ಕೃಷ್ಣ ಪ್ರಕಾಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ, ಶಾಲಾ ನಾಯಕ ಅಭಿಷೇಕ್, ಶಾಲಾಭಿವೃದ್ದಿ ಸಮಿತಿ, ನಮ್ಮ ಕನಸಿನ ಶಾಲೆ ಸಮಿತಿ, ಹಳೆವಿದಾರ್ಥಿ ಸಂಘದ ಸದಸ್ಯರು, ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತರಗತಿ ಕೊಠಡಿ, ಬಯಲು ರಂಗಮಂದಿರ, ಶೌಚಾಲಯ, ಎಲ್ಲಾ ತರಗತಿಗಳಿಗೆ ಟೈಲ್ಸ್ ಅಳವಡಿಕೆ, ಅಂಗಳಕ್ಕೆ ಇಂಟರ್‍ಲಾಕ್ ಅಳವಡಿಕೆ ಕಾಮಗಾರಿಗಳನ್ನು ಸಚಿವರು ಉದ್ಘಾಟಿಸಿದರು. ಬಹುಮುಖ ಪ್ರತಿಭೆ, ಶಾಲಾ ಹಳೆವಿದ್ಯಾರ್ಥಿನಿ ಶ್ರುತಿ ಡಿ.ದಾಸ್ ಅವರನ್ನು ಸಚಿವರು ಸಮ್ಮಾನಿಸಿದರು.

ನಮ್ಮ ಕನಸಿನ ಶಾಲೆ ಸಮಿತಿ ಕಾರ್ಯದರ್ಶಿ ದಿವಾಕರ ದಾಸ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಉಮಾ ಎನ್. ವರದಿ ವಾಚಿಸಿದರು. ಶಿಕ್ಷಕ ಚಂದಪ್ಪ ವಂದಿಸಿದರು. ದೈಹಿಕ ಶಿಕ್ಷಕ ಜಯರಾಂ ಎನ್. ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಧ್ವಜಾರೋಹಣ, ಬಹುಮಾನ ವಿತರಣೆ , ಮಧ್ಯಾಹ್ನ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ನಾಟಕ ಕುಣಿ ಕುಣಿ ನವಿಲೇ, ಮಕ್ಕಳ ಯಕ್ಷಗಾನ ಏಕಾದಶಿ ಶ್ರೀ ದೇವಿ ಮಹಾತ್ಮೆ , ರಾತ್ರಿ ತುಳು ನಾಟಕ ನಡೆಯಿತು.

By Suddi9

Leave a Reply

Your email address will not be published. Required fields are marked *