KAR_7453

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಸ್ಪರ್ಶಾ ಕಲಾ ಮಂದಿರದಲ್ಲಿ ಇತ್ತೀಚೆಗೆ ನಡೆದ ವಕೀಲರ ಸಂಘದ ವಾರ್ಷಿಕೋತ್ಸವ-2018 ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ. ಯು  ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನನ್ನ ಸೇವಾವಧಿಯಲ್ಲಿ ಬಂಟ್ವಾಳ ವಕೀಲರ ಸಹಕಾರ ಅವಿಸ್ಮರಣೀಯ. ಕಿರಿಯ ವಕೀಲರಿಗೆ ಪ್ರೋತ್ಸಾಹ ನೀಡಿ ಅವರನ್ನು ಹುರಿದುಂಬಿಸುವುದೇ ನನ್ನ ಸೇವೆಯ ಉದ್ದೇಶವಾಗಿದ್ದು, ಅದು ಈಡೇರಿದೆ ಎನ್ನುವ ತೃಪ್ತಿ ನನಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

 ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಡಿ.ಎಸ್. ಮಾತನಾಡಿ, ಒತ್ತಡದ ಮಧ್ಯೆಯೂ ವಕೀಲ ವೃತ್ತಿ ಮರೆತು ವಕೀಲರ ಪ್ರತಿಭೆಯ ಅನಾವರಣದ ವೇದಿಕೆ ಇದಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ವೆಂಕ್ರಟಮಣ ಶೆಣೈ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಸುರೇಶ್ ಕುಮಾರ್ ನಾವೂರು ಸ್ವಾಗತಿಸಿದರು. ರವೀಂದ್ರ ಕುಕ್ಕಾಜೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

By Suddi9

Leave a Reply

Your email address will not be published. Required fields are marked *