FB_IMG_1520242201887

ಬಂಟ್ವಾಳ: ಇಸ್ಲಾಮೀಕರಣಕ್ಕೆ ಪ್ರಯತ್ನ ಮಾಡುತ್ತಿರುವ ಸಿದ್ದರಾಮಯ್ಯ  ಭಯೋತ್ಪಾದಕ ಎಂದು  ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ.

5a3a693a83ca75885b01f3bfac233a4c

5btl-Melkar

5btl-Yathreಸೋಮವಾರ ತಾಲೂಕಿನಲ್ಲಿ ಬಿಜೆಪಿ ವತಿಯಿಂದ ನಡೆದ ಜನಸುರಕ್ಷಾ ಯಾತ್ರೆಯ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಿಹಾರದಲ್ಲಿ ಜಂಗಲ್ ರಾಜ ಮಾಡಿದ್ದ ಲಾಲು ಪ್ರಸಾದ್ ಯಾದವ್ ಈಗ ಜೈಲಿನಲ್ಲಿದ್ದಾರೆ. ಮುಂದೆ ‘ಕಾಂಗ್ರೆಸ್, ಸಿದ್ದರಾಮಯ್ಯ, ರಮಾನಾಥ್ ರೈ ಈ ಮೂವರು ಜೈಲಿನಲ್ಲಿರುತ್ತಾರೆ. ಜಯಂತಿಯ ಹೆಸರಿನಲ್ಲಿ ಹಿಂದೂ-ಮುಸ್ಲಿಂ ನಡುವೆ ವಿಷ ಬೀಜವನ್ನು ಬಿತ್ತುವ ಮೂಲಕ ಭಯದ ವಾತಾವರಣವನ್ನು ಸೃಷ್ಠಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.5btl-Bjp

ರಮಾನಾಥ ರೈ ಮುಸ್ಲಿಮರ ಕೃಪೆಯಿಂದ ಸಚಿವನಾದೆ ಎನ್ನುತ್ತಾರೆ. ರಮಾನಾಥ ರೈಗಳು ಸಾಧ್ಯವಾದರೆ ತನಗೆ ಮುಸ್ಲಿಂ ಮತಗಳೇ ಗೆಲ್ಲಲು ಸಾಕು ಎನ್ನುವ ಫೋಷಣೆ ಮಾಡಲಿ.  ಮೂರು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರು,   28 ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಮಾತನಾಡದ ಸಿದ್ದರಾಮಯ್ಯ ಭಯೋತ್ಪಾದಕ ಅಲ್ಲದೆ ಮತ್ತೇನು? ಎಂದು ವಾಗ್ದಾಳಿ ನಡೆಸಿದರು.

65+6+52+25

ಸಂಸದ ಪ್ರಹ್ಲಾದ್ ಜೋಷಿ ಮಾತನಾಡಿ,  ದೇಶದಲ್ಲಿರುವ ಕ್ರಿಶ್ಚಿಯನ್ ಹಾಗೂ ಮುಸ್ಲಿಮರಿಗೆ ತೊಂದರೆಯಾಗಿರುವುದು ಕಾಂಗ್ರೆಸ್ ನಿಂದ. ಕಾಂಗ್ರೆಸ್ ನ ಕೆಟ್ಟ ತುಷ್ಟೀಕರಣ ನೀತಿಯಿಂದಾಗಿ ಮುಸ್ಲಿಮರ ಸ್ಥಿತಿ ಹೀಗಾಗಿದೆ. ಉಗ್ರಗಾಮಿ ಮನೋಸ್ಥಿತಿ ಬೆಳೆಯಲು ಕಾಂಗ್ರೆಸ್ ಮುಖ್ಯ ಕಾರಣ ಎಂದು ದೂರಿದರು.

ರಾಜಕೀಯ ಕಾರಣಕ್ಕಾಗಿ ಕಮ್ಯೂನಿಷ್ಟರು ಹಿಂದೂ ಕಾರ್ಯಕರ್ತರ ಕೊಲೆ ಮಾಡುತ್ತಿದ್ದಾರೆ. ಕಮ್ಯೂನಿಸ್ಟ್ ವಿಚಾರಧಾರೆಗಳನ್ನು ಒಪ್ಪದವರನ್ನು ಕೊಲೆ ಮಾಡಲಾಗುತ್ತದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯ ಕುರಿತು ಲೋಕಸಭೆಯಲ್ಲಿ ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಭಾಷಣಕ್ಕೆ ಅಡ್ಡಿ ಮಾಡುತ್ತಾರೆ ಎಂದು ಕಿಡಿಕಾರಿದರು.

ಪ್ರಶಸ್ತಿ ವಾಪಾಸು ಕೊಡುವವರು ರಾಜ್ಯದಲ್ಲಿ 24 ಜನ ಹಿಂದೂ ಕಾರ್ಯಕರ್ತರು ಸತ್ತಾಗ ಎಲ್ಲಿ ಹೋಗಿದ್ದರು? ಎಂದು ಪ್ರಶ್ನಿಸಿದ ಅವರು, ‘ದೇಶದಲ್ಲಿ ಏನೇ ಘಟನೆ ನಡೆದರೂ ಆರೆಸ್ಸೆಸ್ ಕಾರಣ ಎನ್ನಲಾಗುತ್ತದೆ. ಎಂ.ಎಂ. ಕಲಬುರ್ಗಿ,ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯುವ ಮೊದಲೇ ಕೊಲೆ ಮಾಡಿದವರು ಆರೆಸ್ಸೆಸ್ ಎನ್ನುವ ತೀರ್ಪು ನೀಡುತ್ತಾರೆ  ಎಂದು ಹರಿಹಾಯ್ದರು.

b75bb8a9ce219d4f4ead6024c459b1d2

ಕಾರ್ಯಕ್ರಮದಲ್ಲಿ ಸಂಸದ ಪ್ರಹ್ಲಾದ್ ಜೋಶಿ, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪಕ್ಷದ ಮುಖಂಡರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಹರಿಕೃಷ್ಣ ಬಂಟ್ವಾಳ್, ಜಿ.ಆನಂದ, ಪದ್ಮನಾಭ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *