ಪಡುಪೆರಾರ: ಪೆರಾರ ಶ್ರೀ ನಾಗಬ್ರಹ್ಮ ಶಾಸ್ತ್ಯಾ ದೇವರು, ಇಷ್ಟ ದೇವತಾ, ಬಲವಾಂಡಿ, ವ್ಯಾಘ್ರ ಚಾಮುಂಡಿ ದೇವ-ದೇಚಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಮಾ.1ರಂದು ರಾತ್ರಿ ಅರಸು ದೈವದ ಹಾಗೂ ಬಲವಾಂಡಿ ದೈವದ ನೇಮ ನಡೆದವು. ಅರಸು ದೈವದ ಅಟಿಗೆ ಬೃಹದಾಕಾರವಾಗಿದ್ದು ಅಟಿ 1001 ಅಡಿಕೆ ಮರದ ಹಾಳೆಗಳಿಂದ ಕೂಡಿದೆ.ತದನಂತರ ಬಲವಾಂಡಿ ದೈವದ ನೇಮ ನಡೆಯಿತು. ಭೂತರಾಧನೆಯಲ್ಲಿ ವಿಶೇಷ ಎನ್ನುವಂತೆ ಸಿರಿಮುಡಿ ಅಣಿಯೊಂದಿಗೆ ಕುದುರೆಯನ್ನು ಏರಿ ಬಂಡಿ ಎಳೆಯುವುದು ಇಲ್ಲಿನ ವಿಶೇಷ.

IMG-20180303-WA0023

By suddi9

Leave a Reply

Your email address will not be published. Required fields are marked *