ಬಜ್ಪೆ: ಬಜ್ಪೆ ಏರ್ ರ್ಪೋರ್ಟ್ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಮತ್ತೆ ಇಬ್ಬರನ್ನು ಗುರುವಾರ ಬಂಧಿಸಿದ್ದಾರೆ.
ಬಂಧಿತರನ್ನು ಅದ್ಯಪಾಡಿ ನಿವಾಸಿಗಳಾದ ಅಭಿಜಿತ್ (23)ಹಾಗೂ ಲಿಖಿತ್ (23) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ: ಬಜ್ಪೆ ರ್ಪೋರ್ಟ್ ಸಿಬ್ಬಂದಿ ಎನ್ನಲಾದ ಯುವತಿ ಹಾಗೂ ಯವಕ ಫೆ.9ರಂದು ತಡರಾತ್ರಿ ಪಾರ್ಟಿ ಮುಗಿಸಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಅದ್ಯಪಾಡಿಯಲ್ಲಿ ದುಷ್ಕರ್ಮಿಗಳ ತಂಡವೊಂದು ಬೈಕ್ ನಲ್ಲಿ ಬಂದು ಇವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ದರೋಡೆ ಮಾಡಿದ್ದರು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇಕರ್ ಶೆಟ್ಟಿ ಹಾಗೂ ರಕ್ಷಿತ್ ನನ್ನು ಬಂಧಿಸಲಾಗಿದ್ದು, ಇನ್ನು ಮತ್ತೊಬ್ಬನ ಬಂಧಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

