8241ad5d-c576-4519-b971-6677b168456b

ಕರಿಯಂಗಳ: ಕಾಂಗ್ರೇಸ್ ಕಾರ್ಯಕರ್ತರು ಶುಭಕೋರಿ ಹಾಕಿದ್ದ ಬ್ಯಾನರ್ ವೊಂದನ್ನು ಕಿಡಿಕೇಡಿಗಳು ಹಾನಿ ಗೈದ ಘಟನೆ  ಬುಧವಾರ ತಡರಾತ್ರಿ  ಪೊಳಲಿ ಸಮೀಪದ ಕರಿಯಂಗಳ ಗ್ರಾಮದಲ್ಲಿ ನಡೆದಿದೆ.

ಪೊಳಲಿಯಲ್ಲಿ  ಕಾಂಗ್ರೇಸ್ ಕಾರ್ಯಕರ್ತರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ  ಚಂದ್ರಪ್ರಕಾಶ್ ಶೆಟ್ಟಿ.
1vpchandraprakasshetty

ಇಲ್ಲಿನ ಕಲ್ಕುಟ-ದೇವರಗುಡ್ಡೆಯಿಂದ ಪೊಳಲಿ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು ಒಂದೂವರೆ ಕೋ. ರೂ. ಅನುದಾನ ಒದಗಿಸಿದ್ದ ಸಚಿವ ರಮಾನಾಥ ರೈ ಹಾಗೂ ಸಹಕರಿಸಿದ್ದ ಜಿ.ಪಂ. ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ಅವರಿಗೆ ಶುಭಕೋರಿ ಸ್ಥಳೀಯ ಕಾಂಗ್ರೇಸ್ ಕಾರ್ಯಕರ್ತರು ಹಾಕಿದ್ದ ಬ್ಯಾನರನ್ನು ಕಿಡಿಕೇಡಿಗಳು ಹರಿದು ಹಾಕಿ ಅಟ್ಟಹಾಸ ಮೆರೆದಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ್ದ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪರಿಶೀಲನೆ ನಡೆಸಿ ಬಳಿಕ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಹಾಗೂ  ಬಾಬಾ ಫಕ್ರುದ್ಧೀನ್ ಮಸೀದಿಗೆ ಭೇಟಿ ನೀಡಿ ಕಿಡಿಕೇಡಿಗಳ ಅಟ್ಟಹಾಸಕ್ಕೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಪಾಪಕ್ಕೆ ಮೋಕ್ಷ ಸಿಗಲಿ ಎಂದು ಸಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಚಂದ್ರಹಾಸ ಪಲ್ಲಿಪಾಡಿ, ಚಂದ್ರ ಶೇಖರ್ ದೇವಾಡಿಗ, ಉಮೇಶ್ ಆಚಾರ್ಯ, ಸದಾನಂದ, ಬಶೀರ್ ಬಡಕಬೈಲ್, ಲತೀಫ್, ಪ್ರೇಮ್ನಾಥ್, ಪ್ರಸಾದ್ , ಹರಿಪ್ರಸಾದ್ ಮತ್ತಿತರರು ಕಾಂಗ್ರಸ್ ಮುಖಂಡರು ಉಪಸ್ಥಿತರಿದ್ದರು.

ಈ ದುಷ್ಕೃತ್ಯ ನಡೆಸಿದ್ದವರ ವಿರುದ್ಧ ಪೊಳಲಿಯ ದೇವಸ್ಥಾನ, ಮಸೀದಿಯಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿದ್ದು, ಕಿಡಿಕೇಡಿಗಳಿಗೆ ದೇವರು ಒಳ್ಳೆಯ ಬುದ್ಧಿಕೊಡಲಿ ಎಂದು ಬೇಡಿದ್ದೇವೆ.

-ಚಂದ್ರಪ್ರಕಾಶ್ ಶೆಟ್ಟಿ, ಜಿ.ಪಂ.ಸದಸ್ಯ

By suddi9

Leave a Reply

Your email address will not be published. Required fields are marked *