ಬಂಟ್ವಾಳ: ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾರೆಂಕಿ ಗ್ರಾಮದ ಪರನೀರು ಎಂಬಲ್ಲಿ ವಿವಾಹಿತ ಮಹಿಳೆಯೊಬ್ಬರು ಕಳೆದ ಎರಡು ದಿನಗಳ ಹಿಂದೆ ಮನೆ ಬಿಟ್ಟು ನಾಪತ್ತೆಯಾಗಿರುವ ಬಗ್ಗೆ  ದೂರು ದಾಖಲಾಗಿದೆ.

ಇಲ್ಲಿನ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರಿ ಆಯಿಷಾ(25) ಎಂಬಾಕೆಯನ್ನು ಕಳೆದ ಏಳು ವರ್ಷಗಳ ಹಿಂದೆಯಷ್ಟೇ ಇಲ್ಲಿಗೆ ಸಮೀಪದ ತಣ್ಣೀರುಪಂಥ ನಿವಾಸಿ ಆಶ್ರಫ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು.

ಈಕೆಯ ಪತಿ ವಿದೇಶದಲ್ಲಿದ್ದು, ಇವರಿಗೆ 5ರ ಹರೆಯದ ಪುತ್ರಿ ಮತ್ತು 3ರ ಹರೆಯದ ಪುತ್ರ ಇದ್ದಾರೆ. ಕಳೆದ ಎರಡು ದಿನಗಳ ಹಿಂದೆ ರಾತ್ರಿ ತನ್ನ ತಾಯಿ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ಆಯಿಷಾ ಮರುದಿನ ಮುಂಜಾನೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *